ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಮಳೆ-ಗಾಳಿಯಿಂದ ಧರೆಗುರುಳಿದ ಕಂಬಗಳು

ಚಿಮ್ಮನಹಳ್ಳಿಯಲ್ಲಿ ಮಳೆಯಿಂದಾಗಿ ಮನೆ ಕುಸಿದಿರುವುದು.  ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ವಿದ್ಯುತ್ ಕಂಬ ಬಿದ್ದಿರುವುದು.
ಚಿಮ್ಮನಹಳ್ಳಿಯಲ್ಲಿ ಮಳೆಯಿಂದಾಗಿ ಮನೆ ಕುಸಿದಿರುವುದು. ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ವಿದ್ಯುತ್ ಕಂಬ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಸಾರಿ ನೆಲ್ಕುದ್ರಿಯಲ್ಲಿ ಎರಡು ದಿನ ಕತ್ತಲು
ಹಗರಿಬೊಮ್ಮನಹಳ್ಳಿ: ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಮಳೆ-ಗಾಳಿಯಿಂದ ಕೃಷಿ ಜಮೀನುಗಳಲ್ಲಿ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗ್ರಾಮದಲ್ಲೂ ವಿದ್ಯುತ್ ಸಂಪರ್ಕ ಇಲ್ಲದೆ ನಿವಾಸಿಗಳು ಎರಡು ದಿನ ಕತ್ತಲಲ್ಲಿ ಕಾಲ ಕಳೆದಿದ್ದಾರೆ.
ರೈತರಾದ ಎನ್.ಜೆ.ಬಸವರಾಜ, ಮಾಳಿಗಿ ಗೌರಮ್ಮ, ಮಾಳಿಗಿ ಮಹೇಶ, ಕರಿಯಪ್ಪನವರ ಮಹೇಶ ಸೇರಿದಂತೆ ಇತರ ರೈತರ ಹೊಲದಲ್ಲಿರುವ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ದುರಸ್ತಿಗೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಸರಬರಾಜಿಗೆ ಪರಿವರ್ತಕ ಬಂದಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜೆಸ್ಕಾಂ ಎಇಇ ನಾಗರಾಜ ಕುರೇಕುಪ್ಪ, ನೆಲ್ಕುದ್ರಿ ಗ್ರಾಮದಲ್ಲಿ ಮಳೆ, ಬಿರುಗಾಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗಮನಕ್ಕೆ ಬಂದ ಕೂಡಲೆ ವಿದ್ಯುತ್ ಪರಿವರ್ತಕ ಕಳಿಸಲಾಗಿದೆ. ಬಳಿಕ ವಿದ್ಯುತ್ ಸರಬರಾಜು ಮಾಡಲಾಗಿದೆ. ಕೃಷಿ ಜಮೀನುಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದು ಗಮನಕ್ಕೆ ಬಂದಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ನೆಲ್ಕುದ್ರಿ ಗ್ರಾ.ಪಂ.ವ್ಯಾಪ್ತಿಯ ಚಿಮ್ಮನಹಳ್ಳಿ ಗ್ರಾಮದಲ್ಲಿ ರಜಿಯಾಬೀ ಹೊನ್ನೂರುಸಾಬ್ ಅವರ ಮಣ್ಣಿನ ಮನೆ ಮಳೆಯಿಂದಾಗಿ ಭಾಗಶಃ ಕುಸಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net