ಐಷಾರಾಮಿ ಜೀವನಕ್ಕಿಂತ ಪರೋಪಕಾರ ಶ್ರೇಷ್ಠ

ಕಂಪ್ಲಿ ಶ್ರೀ ಮುನಿಸುವ್ರತ್‌ಸ್ವಾಮಿ ಮಂದಿರದಿಂದ ಆದೋನಿಯ ಪೆದ್ದತುಂಬಳಂ ಪಾರ್ಶ್ವಮಣಿ ದೇವಸ್ಥಾನಕ್ಕೆ ಜೈನರು ಪಾದಯಾತ್ರೆ ಕೈಗೊಂಡರು.
ಕಂಪ್ಲಿ ಶ್ರೀ ಮುನಿಸುವ್ರತ್‌ಸ್ವಾಮಿ ಮಂದಿರದಿಂದ ಆದೋನಿಯ ಪೆದ್ದತುಂಬಳಂ ಪಾರ್ಶ್ವಮಣಿ ದೇವಸ್ಥಾನಕ್ಕೆ ಜೈನರು ಪಾದಯಾತ್ರೆ ಕೈಗೊಂಡರು.
Published on
ಕಂಪ್ಲಿ: ಪಟ್ಟಣದ ಶ್ರೀ ಮುನಿಸುವ್ರತ್‌ಸ್ವಾಮಿ ಮಂದಿರದಿಂದ ಆದೋನಿಯ ಪೆದ್ದತುಂಬಳಂ ಪಾರ್ಶ್ವಮಣಿ ದೇವಸ್ಥಾನದವರೆಗೆ ಮಂಗಳವಾರ ಪಾದಯಾತ್ರೆ ಆರಂಭಗೊಂಡಿತು.
ಬೆಳ್ಳಿರಥದಲ್ಲಿ ಆದಿತೀರ್ಥಂಕರ ಪಾರ್ಶ್ವನಾಥ ಮೂರ್ತಿ, ನಂದಿಕೋಲು, ಸಮಾಳ, ಕುದುರೆ, ತಾಷಾರಾಂಡೋಲ್, ಜೈನದೀಕ್ಷಾರ್ಥಿಗಳು, ರಾಜಸ್ತಾನಿ ಬ್ಯಾಂಡ್ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾಜಸ್ತಾನಿ, ಹಿಂದಿಯೊಂದಿಗೆ ಕನ್ನಡ ಗೀತೆಗಳನ್ನು ಬಿತ್ತರಿಸಲಾಯಿತು.
ಜೈನ ಸಂತರಾದ ಮನೀಶ್ ಪ್ರಭಸಾಗರಶ್ರೀ, ಮತೀಶ್ ಪ್ರಭಸಾಗರಶ್ರೀ, ಪಾರ್ಶ್ವಮಣಿತೀರ್ಥಪ್ರದೀಕ, ಸುಲೋಚನಾಶ್ರೀ, ಸುಲಕ್ಷಣಾಶ್ರೀ ಸೇರಿದಂತೆ 28 ಜನ ಜೈನ ಸಂತರು, ಜೈನ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪದಾಧಿಕಾರಿಗಳಾದ ಪಾರಸ್‌ಮಲ್ ಹುಂಡಿಯಾ, ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಫತೇಕುಮಾರ್ ಭಾಫ್ಣ, ಕಲಾಪೂರ್ಣ ಯುವಕ ಮಂಡಲ, ಪದ್ಮಾವತಿ ಬಹು ಮಂಡಲ, ನೌಕಾರ್ ಮಾಲೀಕ ಮಂಡಲ್, ಗುಜರಾತ್, ರಾಜಸ್ತಾನ, ದೆಹಲಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ 350 ಜೈನ ಪಾದಯಾತ್ರಿಗಳಿದ್ದರು.
ಇಟಗಿ ಬಳಿ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಜೈನ ಸಂತ ಮನೀಶ್‌ಪ್ರಭಸಾಗರಶ್ರೀಗಳು ಆಶೀರ್ವಚನ ನೀಡಿ, ಜೀವನದಲ್ಲಿ ಹಣ, ಅಧಿಕಾರ ಮತ್ತು ಐಷಾರಾಮಿ ಜೀವನಕ್ಕಿಂತ ಸತ್ಯ, ಶಾಂತಿ, ಅಹಿಂಸೆ ಮತ್ತು ಪರೋಪಕಾರ, ದೇವರ ಮೇಲಿನ ಅನನ್ಯ ನಂಬಿಕೆಗಳು ಅತ್ಯಂತ ಶ್ರೇಷ್ಠವಾಗಿವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net