ಐಜಿಪಿ ಹರ್ಷಗೆ ಪಿಎಚ್‌ಡಿ ಘೋಷಣೆ

ಐಜಿಪಿ ಹರ್ಷಗೆ ಪಿಎಚ್‌ಡಿ ಘೋಷಣೆ
ಐಜಿಪಿ ಹರ್ಷಗೆ ಪಿಎಚ್‌ಡಿ ಘೋಷಣೆ
Published on

ಪ್ರಮುಖ ಮುಖ್ಯಾಂಶಗಳು

  • ಪಿಎಚ್‌ಡಿ
ಬಳ್ಳಾರಿ : ಕುವೆಂಪು ವಿಶ್ವವಿದ್ಯಾಲಯವು ಬಳ್ಳಾರಿ ವಲಯ ಪೊಲೀಸ್ ಉಪ ಮಹಾನಿರೀಕ್ಷಕ (ಐಜಿಪಿ) ಡಾ. ಪಿ.ಎಸ್.ಹರ್ಷ ಅವರಿಗೆ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದಲ್ಲಿನ ಸಂಶೋಧನೆಗಾಗಿ ಪಿಎಚ್‌ಡಿ ಪದವಿ ಘೋಷಿಸಿದೆ.
ವಿವಿಯ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರೊ.ಡಾ.ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಹರ್ಷ ಅವರು ‘ನಾಗರಹೊಳೆ, ಬಂಡೀಪುರ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆ ಹಾಗೂ ಮಾನವ-ಹುಲಿ ಸಂಘರ್ಷ ಮತ್ತು ಅದರ ಪ್ರಭಾವಗಳ ಕುರಿತು ಅಧ್ಯಯನ’ ಎಂಬ ಪ್ರಬಂಧ ಮಂಡಿಸಿದ್ದಾರೆ. ಮೇ 6, 2026 ರಂದು ನಡೆಯಲಿರುವ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಪಿಎಚ್‌ಡಿ ಪ್ರಮಾಣಪತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net