ಸಿರಿಗೇರಿ: ಗ್ರಾಮದ ಸಿಂಧೋಳ್ಳು ಸಮುದಾಯದವರ ಮನೆಗಳಿಗೆ ಜನತಾ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಿ.ಆರ್.ಶಿವಕುಮಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಯ್ಯ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪಾಲಕರನ್ನು ಕೋರಿದರು.
ಶಿಕ್ಷಣದ ಮಹತ್ವದ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸಿದರು. ಇದರಿಂದಾಗಿ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳಿಸಲು ಸಿಂಧೋಳ್ಳು ಸಮುದಾಯದ ಪಾಲಕರು ಒಪ್ಪಿಕೊಂಡರು. 10 ಮಕ್ಕಳು ಶಾಲೆಗೆ ದಾಖಲಾದರು. ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಯಿತು.
ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ, ಎಸ್‌ಡಿಎಂ ಸಿ ಅಧ್ಯಕ್ಷ ಎಚ್.ರಾಮಲಿಂಗ, ಎಚ್.ಈರಣ್ಣ, ಎಚ್.ಹನುಮಯ್ಯ, ಶಿಕ್ಷಕರಿದ್ದರು.