ನಗರದ ಶಾಖಾ ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರ್ ಮಾತನಾಡಿ, ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಮತ್ತು ಇತರ ಮಹಾನ್ ನಾಯಕರ ನೆನಪಿಗಾಗಿ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಗ್ರಂಥಾಲಯ ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿಸಿದರು. ಶಿಕ್ಷಕ ವೈ.ಎಂ.ವಿಜಯಕುಮಾರ್, ನಿವೃತ ಮುಖ್ಯಶಿಕ್ಷಕ ಮಹಾಂತೇಶ, ನಿವೃತ್ತ ಹಿರಿಯ ಫಾರ್ಮಸಿಸ್ಟ್ ಬಚೇನಹಳ್ಳಿ ಈಶಪ್ಪ, ಅಂಚೆ ಇಲಾಖೆ ನೌಕರ ಕಲ್ಲೇಶಪ್ಪ ಇತರರಿದ್ದರು.