ಹೂವಿನಹಡಗಲಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಕೊರತೆಯಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಯಿತು.
ರಾತ್ರಿ ಪಟ್ಟಣದ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಖಾಲಿಯಾಗಿದ್ದು, ಹಲವು ಬಂಕ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇಂಧನಕ್ಕಾಗಿ ಬಂಕ್‌ಗಳಿಗೆ ಬರುತ್ತಿದ್ದ ವಾಹನ ಸವಾರರು ನಿರಾಸೆಯಿಂದ ಬೇರೆಡೆ ಹೋಗುತ್ತಿರುವುದು ಕಂಡುಬಂತು.
ಇನ್ನು ಕೆಲ ಬಂಕ್‌ಗಳಲ್ಲಿ ಜನರು ದೊಡ್ಡ ಬಾಟಲಿಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತು ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಿಸಿಕೊಂಡರು.