ಇಂಧನ ಕೊರತೆ ಬಂಕ್‌ಗಳಲ್ಲಿ ಜನರ ಸಾಲು

ಹೂವಿನಡಹಗಲಿಯ ಹೊಳಗುಂದಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿಕೊಳ್ಳಲು ಜನರು ಬುಧವಾರ ರಾತ್ರಿ ಸರದಿ ಸಾಲಿನಲ್ಲಿ ನಿಂತಿರುವುದು.
ಹೂವಿನಡಹಗಲಿಯ ಹೊಳಗುಂದಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿಕೊಳ್ಳಲು ಜನರು ಬುಧವಾರ ರಾತ್ರಿ ಸರದಿ ಸಾಲಿನಲ್ಲಿ ನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪೆಟ್ರೋಲ್- ಡೀಸೆಲ್‌ಗಾಗಿ ಕ್ಯೂ ನಿಂತ ಜನ
ಹೂವಿನಹಡಗಲಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಕೊರತೆಯಿಂದ ಸಾರ್ವಜನಿಕರು ಬುಧವಾರ ಸಂಕಷ್ಟ ಎದುರಿಸುವಂತಾಯಿತು.
ಬುಧವಾರ ರಾತ್ರಿ ಪಟ್ಟಣದ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಖಾಲಿಯಾಗಿದ್ದು, ಹಲವು ಬಂಕ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇಂಧನಕ್ಕಾಗಿ ಬಂಕ್‌ಗಳಿಗೆ ಬರುತ್ತಿದ್ದ ವಾಹನ ಸವಾರರು ನಿರಾಸೆಯಿಂದ ಬೇರೆಡೆ ಹೋಗುತ್ತಿರುವುದು ಕಂಡುಬಂತು. ಇನ್ನು ಕೆಲ ಬಂಕ್‌ಗಳಲ್ಲಿ ಜನರು ದೊಡ್ಡ ಬಾಟಲಿಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತು ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಿಸಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net