ಒಂಟಿ ಮಹಿಳೆಯರಿಗೆ ಪಿಂಚಣಿ ನೀಡಲಿ

ಹಗರಿಬೊಮ್ಮನಹಳ್ಳಿಯಲ್ಲಿ ಕರ್ನಾಟಕ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ಪದಾಧಿಕಾರಿಗಳು ಸಿಡಿಪಿಒ ಬೋರೇಗೌಡಗೆ ಮನವಿ ಸಲ್ಲಿಸಿದರು. ಸಂಘಟನೆ ರಾಜ್ಯ ಸಂಚಾಲಕಿ ಬಿ.ಮಾಳಮ್ಮ, ತಾಲೂಕು ಅಧ್ಯಕ್ಷೆ ಜಿ.ಹುಲಿಗೆಮ್ಮ, ಕಾರ್ಯದರ್ಶಿ ಚಾಂದಬಿ, ಜಗನ್ನಾಥ ಇತರರಿದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ಕರ್ನಾಟಕ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ಪದಾಧಿಕಾರಿಗಳು ಸಿಡಿಪಿಒ ಬೋರೇಗೌಡಗೆ ಮನವಿ ಸಲ್ಲಿಸಿದರು. ಸಂಘಟನೆ ರಾಜ್ಯ ಸಂಚಾಲಕಿ ಬಿ.ಮಾಳಮ್ಮ, ತಾಲೂಕು ಅಧ್ಯಕ್ಷೆ ಜಿ.ಹುಲಿಗೆಮ್ಮ, ಕಾರ್ಯದರ್ಶಿ ಚಾಂದಬಿ, ಜಗನ್ನಾಥ ಇತರರಿದ್ದರು.
Published on
ಹಗರಿಬೊಮ್ಮನಹಳ್ಳಿ: ರಾಜ್ಯಾದ್ಯಂತ ಒಂಟಿ ಮಹಿಳೆಯರ ಗಣತಿ ಮಾಡಬೇಕು. ಒಂಟಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವುದರೊಂದಿಗೆ ರಕ್ಷಣೆಗೆ ಸರ್ಕಾರ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದು ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ಸಂಚಾಲಕಿ ಬಿ.ಮಾಳಮ್ಮ ಆಗ್ರಹಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲೂಕು
ಪದಾಧಿಕಾರಿಗಳು ಹಾಗು ಸಿಐಟಿಯು ಸಹಯೋಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯದ ಮಹಿಳಾ ಜನಸಂಖ್ಯೆಯಲ್ಲಿ ಶೇ.30 ಇರುವ ಒಂಟಿ ಮಹಿಳೆಯರು, ಲಿಂಗ ತಾರತಮ್ಯ ಮತ್ತು ಜಾತಿ ತಾರತಮ್ಯ ಕ್ಕೊಳಗಾಗಿದ್ದಾರೆ. ದುಡಿಯುವ ಅವಕಾಶಗಳೇ ಬತ್ತಿ ಹೋಗಿ ತಲ್ಲಣದಲ್ಲಿ ಬದುಕುತ್ತಿದ್ದಾರೆ. ಒಂಟಿ ಮಹಿಳೆಯರಿಗೆ ಪುನರ್ವಸತಿ ಸಹಿತ ಮಾಸಿಕ ಪಿಂಚಣಿ, ವಿದ್ಯಾವಂತ ಒಂಟಿ ಮಹಿಳೆಯರಿಗೆ ಸರ್ಕಾರಿ ನೌಕರಿ, ಸಾಮಾಜಿಕವಾಗಿ ಬಹಿಷ್ಕೃತ ಮಹಿಳೆಯರನ್ನು ಮರು ಮದುವೆಯಾಗಲು ಇಚ್ಚಿಸುವ ಪುರುಷರಿಗೆ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ಬೋರೇಗೌಡಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಸಂಚಾಲಕ ಎಸ್.ಜಗನ್ನಾಥ್, ಸಂಘದ ಅಧ್ಯಕ್ಷೆ ಜಿ.ಹುಲಿಗೆಮ್ಮ, ಕಾರ್ಯದರ್ಶಿ ಚಾಂದಬಿ, ಪ್ರಮುಖರಾದ ಗುರುಶಾಂತಮ್ಮ, ವೀಣಾ, ರೇಣುಕಾ, ಗಂಗಮ್ಮ, ರಂಜಿತ, ಪೂಜಾರಿ ದುರುಗಮ್ಮ, ನೇತ್ರಮ್ಮ, ಅರ್ಕಾಪುರ ರೇಣವ್ವ, ಜಯಮ್ಮ, ತಳವಾರ ಹುಲಿಗೆಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net