ತತ್ವಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿ

ಸಂಡೂರಿನ ತಾಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.
ಸಂಡೂರಿನ ತಾಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.
Published on
ಸಂಡೂರು: ಸಂತ ಸೇವಾಲಾಲರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದ್ದು, ಅವರ ತತ್ವಗಳು ಎಂದಿಗೂ ಪ್ರಸ್ತುತ ಎಂದು ನಿವೃತ್ತ ಮುಖ್ಯಶಿಕ್ಷಕ ಎಂ.ಟಿ.ರಾಥೋಡ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಸೇವಾಲಾಲರು ಬಂಜಾರ ಸಮಾಜದ ಧರ್ಮ ಗುರುಗಳಾಗಿ, ಜನರಿಗೆ ಕಾಯಕದ ಮಹತ್ವ ಹಾಗೂ ಸಮಾಜದ ಸಂಘಟನೆ ತಿಳಿಸಿಕೊಟ್ಟರು. ಸಮಾಜದ ಪ್ರಗತಿಗೆ ನಿರಂತರ ಶ್ರಮಿಸುವುದರೊಂದಿಗೆ ಒಗ್ಗಟ್ಟು ಮೂಡಿಸಿದರು. ಇದರಿಂದಾಗಿ ಬಂಜಾರ ಸಮುದಾಯ ಸಮಾಜದಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ. ಸಮಾಜದ ಪ್ರತಿಯೊಬ್ಬರೂ ಸಂತ ಸೇವಾಲಾಲ್ ಅವರ ತತ್ವಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net