ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ

 ಮತದಾರರ ಪಟ್ಟಿ ಪರಿಷ್ಕರಣೆ(
ಮತದಾರರ ಪಟ್ಟಿ ಪರಿಷ್ಕರಣೆ(
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್
  • ಸಂವಿಧಾನತ್ಮಕ
  • ಪಾರದರ್ಶಕ
ಕಂಪ್ಲಿ: ತಾಲೂಕಿನ ಬಿಎಲ್‌ಒ, ರಾಷ್ಟ್ರೀಯ ಪಕ್ಷಗಳ ಬಿಎಲ್‌ಎ-2ಗಳಿಗೆ ಇಲ್ಲಿನ ಚಂದ್ರಕಲ ಚಿತ್ರಮಂದಿರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಕುರಿತು ಮಾಹಿತಿ ನೀಡಲಾಯಿತು.
ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಎಸ್‌ಐಆರ್ ಸಂವಿಧಾನತ್ಮಕವಾಗಿದ್ದು ಪಾರದರ್ಶಕವಾಗಿದೆ. ರಾಜಕೀಯ ಪ್ರತಿನಿಧಿಗಳು ಸಕ್ರಿಯವಾಗಿ ಬಿಎಲ್‌ಒಗಳೊಂದಿಗೆ ರಾಜಕೀಯ ಪ್ರತಿನಿಧಿ ಬಿಎಲ್‌ಎ-2ಗಳು ಮನೆ ಮನೆಗೆ ತೆರಳಿ ಮತ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಚುನಾವಣೆ ನೋಂದಣಾಧಿಕಾರಿ ಕೆ.ಆರ್.ದೇವರಾಜ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಎಲ್‌ಒ, ಬಿಎಲ್‌ಎ-2 ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಹಕರಿಸಬೇಕು ಎಂದರು.
2025ರ ಪಟ್ಟಿಯಲ್ಲಿ ಮತದಾರರ ಹೆಸರಿದ್ದು 2002 ರಮತಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, 2026ರ ಅ.1ಕ್ಕೆ 18ವರ್ಷ ತುಂಬಿದ ಮತದಾರರು ಪಟ್ಟಿಗೆ ಸೇರಬಹುದು. ಮನೆ ಬಾಗಿಲು ಹಾಕಿ ಊರಿಗೆ ತೆರಳಿದ್ದರೆ ಕೈಗೊಳ್ಳಬೇಕಿರುವ ಕ್ರಮ ಸೇರಿ ಬಿಎಲ್‌ಎಗಳ ನಾನಾ ಪ್ರಶ್ನೆಗಳಿಗೆ ತಹಸೀಲ್ದಾರ್ ಉತ್ತರಿಸಿದರು. ತಾಲೂಕು ತರಬೇತುದಾರರಾದ ಮುದುಕಪ್ಪ ನೆಲಜೇರಿ, ಪ್ರಶಾಂತಗೌಡ, ಶಿರಸ್ತೇದಾರ್‌ರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ, ಆರ್‌ಐ ವೈ.ಎಂ.ಜಗದೀಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net