ಬಳ್ಳಾರಿಯ ಬಸವ ದಳದಲ್ಲಿ ಆಯೋಜಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ. ಅರುಣ್ ಕುಮಾರ್ ಲಗಶೆಟ್ಟಿ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ತಾಲೂಕು ಅಧ್ಯಕ್ಷ ಕೆ.ವಿ.ನಾಗರೆಡ್ಡಿ, ನಿ.ಪ್ರಾಚಾರ್ಯ ಡಾ.ಎಚ್.ಮಲ್ಲಿಕಾರ್ಜುನಗೌಡ, ಉಪನ್ಯಾಸಕರಾದ ಜೆ.ಭಾಗ್ಯಲಕ್ಷ್ಮೀ, ಬಿ.ಲಿಂಗಾರೆಡ್ಡಿ, ಕೆ.ಗಾದಿಲಿಂಗಪ್ಪ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಹಿಸಲಿ
ಬಳ್ಳಾರಿ : ಮೊಬೈಲ್ ಸಂಸ್ಕೃತಿ ಹೊರಟು ಹೋಗಿ ಪುಸ್ತಕ ಸಂಸ್ಕೃತಿ ಮಕ್ಕಳಲ್ಲಿ ಮೇಳಯಿಸುವಂತೆ ಪಾಲಕರು ಕಾಳಜಿ ವಹಿಸಬೇಕು ಎಂದು ವಿಎಸ್‌ಕೆ ವಿವಿಯ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅರುಣ್ ಕುಮಾರ್ ಲಗಶೆಟ್ಟಿ ಹೇಳಿದರು.
ನಗರದ ರಾಷ್ಟ್ರೀಯ ಬಸವದಳದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರನ್ನು ಅನಾಥಾಶ್ರಮಗಳಿಗೆ ಕಳಿಸುವ ಸಂಸ್ಕೃತಿ ನಿಲ್ಲಬೇಕಾದರೆ ಪ್ರತಿನಿತ್ಯ ಮನೆ ಮನೆಗಳಲ್ಲಿ ವಚನ ಸಿಂಚನವಾಗಬೇಕು. ಇಂದಿನ ಸಮಾಜದಲ್ಲಿ ಜನಸಾಮಾನ್ಯರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಸ್ವಾರ್ಥವಿಲ್ಲದ ಸಮಾಜ ನಿರ್ಮಾಣವಾಗಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ವ್ಯಕ್ತಿಯ ದೃಷ್ಟಿ ಬದಲಾದಾಗ ಮಾತ್ರ ಸೃಷ್ಟಿ ಬದಲಾಗುತ್ತದೆ. ಈ ರೀತಿಯ ಆಧ್ಯಾತ್ಮದ ಸಿಂಚನದಿಂದ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದರು.