ವಚನಾನಂದ ಶ್ರೀಗಳ ಉಚ್ಚಾಟನೆಗೆ ಪಂಚಮಸಾಲಿ ಸಮಾಜದ ಖಂಡನೆ

ಹರಪನಹಳ್ಳಿಯಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಮುಖಂಡರು ಸೇರಿದ್ದ ಸಭೆಯಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪುರಸಭೆ ಮಾಜಿ ಅಧ್ಯಕ್ಷೆ ಪ್ರಭಾ ಅಜ್ಜಣ್ಣ, ಜಿಪಂ ಮಾಜಿ ಸದಸ್ಯ ತೆಲಿಗಿ ಈಶಣ್ಣ, ಪಂಚಮಸಾಲಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಬಣ್ಣ, ವಕೀಲ ಬಾವಿಹಳ್ಳಿ ಬಸವರಾಜ, ಓಂಕಾರಗೌಡ, ಎಚ್. ಮಲ್ಲಿಕಾರ್ಜುನ, ಅಡವಿಹಳ್ಳಿ ಬಸವರಾಜ, ಪ್ರಭು ಸೇರಿದಂತೆ ಇತರರು ಉಪಸ್ಥಿತರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಠಕ್ಕೆ
  • ಬಂದ
  • ದೇಣಿಗೆ
ಹರಪನಹಳ್ಳಿ: ಸರ್ಕಾರ-ಭಕ್ತರಿಂದ ಮಠಕ್ಕೆ ಬಂದ ದೇಣಿಗೆಯನ್ನು ಟ್ರಸ್ಟಿಗಳು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿರುವ ತಾಲೂಕು ಪಂಚಮಸಾಲಿ ಸಮಾಜ, ದುರ್ಬಳಕೆಯನ್ನು ಪ್ರಶ್ನಿಸಿದ ವಚನಾನಂದ ಶ್ರೀಗಳನ್ನು ಮಠದಿಂದ ಉಚ್ಚಾಟಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮಾಜದ ಮಾಜಿ ಖಜಾಂಚಿ ಶಶಿಧರ ಪೂಜಾರ್ ಮಾತನಾಡಿ, ಶ್ರೀಗಳ ವಿರುದ್ಧ ಟ್ರಸ್ಟ್‌ನ ಕೆಲವರು ಕುತಂತ್ರ ನಡೆಸಿದ್ದಾರೆ. ಹಣಕಾಸಿನ ವ್ಯವಹಾರಗಳನ್ನು ಶ್ರೀಗಳ ಸಮ್ಮುಖದಲ್ಲಿ ಕೂಡಲೇ ಪ್ರಚುರಪಡಿಸಬೇಕು. ಮಠದ ಆಸ್ತಿಗಳು ಕೆಲವು ವ್ಯಕ್ತಿಗಳ ಹೆಸರಿನಲ್ಲಿ ದಾಖಲಾಗಿದ್ದು, ತಕ್ಷಣವೇ ಮಠದ ಹೆಸರಿಗೆ ವರ್ಗಾಯಿಸಬೇಕು.
ಬೈಲಾ ಪ್ರಕಾರ ಪ್ರತಿ ವರ್ಷ ಟ್ರಸ್ಟ್ ಪದಾಧಿಕಾರಿಗಳು ಬದಲಾಗಬೇಕು. ಆದರೆ, ಹಲವು ವರ್ಷಗಳಿಂದ ಹಳೆಯ ಸದಸ್ಯರೇ ಮುಂದುವರಿದಿದ್ದಾರೆ. ರಾಜ್ಯದ ಎಲ್ಲ ಭಾಗಗಳ ಪ್ರತಿನಿಧಿಗಳಿರುವ ಹೊಸ ಮಂಡಳಿ ರಚನೆಯಾಗಬೇಕು. ಧಾರ್ಮಿಕ ನಿಯಮಗಳಂತೆ ಪೀಠಾಧಿಪತಿಗಳನ್ನು ಉಚ್ಚಾಟಿಸುವ ಹಕ್ಕು ಟ್ರಸ್ಟ್ ಸದಸ್ಯರಿಗಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net