ಪಂಪ ಕನ್ನಡ ಸಾಹಿತ್ಯದ ಶ್ರೇಷ್ಠ ಕವಿ

ಬಳ್ಳಾರಿಯ ಎಸ್‌ಎಸ್‌ಎ ಕಾಲೇಜಿನಲ್ಲಿ ಆಯೋಜಿಸಿದ್ದ ಪಂಪನ ಕರ್ಣ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಲೋಹಿಯಾ ಪ್ರಕಾಶನ ಮುಖ್ಯಸ್ಥ ಸಿ.ಚನ್ನಬಸವಣ್ಣ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಪ್ರಹ್ಲಾದ್ ಚೌದ್ರಿ, ಲೇಖಕ ಡಾ.ಜಾಜಿ ದೇವೆಂದ್ರಪ್ಪ, ಪ್ರೊ. ದಸ್ತಗೀರ್ ಸಾಬ್, ಪ್ರೊ. ಬಿ.ರಾಮಸ್ವಾಮಿ, ಲಿಂಗಪ್ಪ  ಇದ್ದರು.
ಬಳ್ಳಾರಿಯ ಎಸ್‌ಎಸ್‌ಎ ಕಾಲೇಜಿನಲ್ಲಿ ಆಯೋಜಿಸಿದ್ದ ಪಂಪನ ಕರ್ಣ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಲೋಹಿಯಾ ಪ್ರಕಾಶನ ಮುಖ್ಯಸ್ಥ ಸಿ.ಚನ್ನಬಸವಣ್ಣ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಪ್ರಹ್ಲಾದ್ ಚೌದ್ರಿ, ಲೇಖಕ ಡಾ.ಜಾಜಿ ದೇವೆಂದ್ರಪ್ಪ, ಪ್ರೊ. ದಸ್ತಗೀರ್ ಸಾಬ್, ಪ್ರೊ. ಬಿ.ರಾಮಸ್ವಾಮಿ, ಲಿಂಗಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯದ ಒಬ್ಬ ಶ್ರೇಷ್ಠ ಕವಿ
ಬಳ್ಳಾರಿ : ಪಂಪನು ಭಾರತೀಯ ಭಾಷೆಗಳಲ್ಲಿಯೇ ಉತ್ಕೃಷ್ಟ ಕಾವ್ಯ ರಚಿಸಿ ನಂತರದ ಕವಿಗಳಿಗೆ ಮಾರ್ಗದರ್ಶಕನಾಗಿರುವುದು ಹೆಮ್ಮೆಯ ಸಂಗತಿ ಎಂದು ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ.ಚನ್ನಬಸವಣ್ಣ ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆಯ ಕೋಶ ಹಾಗೂ ಕನ್ನಡ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಪಂಪನ ಕರ್ಣ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಪ ಕನ್ನಡ ಸಾಹಿತ್ಯದ ಒಬ್ಬ ಶ್ರೇಷ್ಠ ಕವಿಯಾಗಿದ್ದರು. ಪಂಪನ ಕಾವ್ಯತತ್ವ, ಚಿಂತನೆ, ಲೋಕಾನುಭವ ವಿಶಿಷ್ಟವಾದುದು. ಅವರ ಅಪರೂಪದ ಸಾಹಿತ್ಯ ಮತ್ತೆ ಮತ್ತೆ ಓದುವುದರ ಮೂಲಕ ನಾವು ಕನ್ನಡದ ಹೆಮ್ಮೆಯ ವಾರಸುದಾರರಾಗಬೇಕಿದೆ ಎಂದರು.
ಲೇಖಕ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಪಂಪನ ಭಾರತವು ಬರಿ ಮಹಾಭಾರತದ ಕಥೆಯಲ್ಲ. ಅದು ದೇಸಿಯ ಕಥೆ. ಪಂಪಭಾರತ ಮಹಾಕಾವ್ಯದಲ್ಲಿ ಬರುವ ಯುದ್ಧದ ಪ್ರಸಂಗ, ಮಾತುಕತೆ, ಶೈಲಿ ಎಲ್ಲವೂ ದೇಸಿಯತೆಯನ್ನು ಎತ್ತಿ ಹಿಡಿಯುತ್ತವೆ ಎಂದು ಬಣ್ಣಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ ಮಾತನಾಡಿ, ಇಂದು ಹಳೆಗನ್ನಡ ಸಾಹಿತ್ಯ ಓದುವ, ಬೋಧಿಸುವ ಕೆಲಸ ಕಡಿಮೆಯಾಗುತ್ತಿದೆ. ಹಳೆಗನ್ನಡ ಸಾಹಿತ್ಯದಲ್ಲಿ ಈ ಹೊತ್ತಿಗೂ ಬೇಕಾಗುವ ಜೀವನ ಮೌಲ್ಯಗಳು, ಚಿಂತನಾ ಧಾರೆಗಳಿವೆ. ಹೊಸ ತಲೆಮಾರಿಗೆ ಹಳೆಗನ್ನಡ ಸಾಹಿತ್ಯದ ಬಗೆಗೆ ಪ್ರೀತಿ, ಅಭಿರುಚಿ ಬೆಳೆಸಲು ಈ ಬಗೆಯ ಕಾರ್ಯಕ್ರಮಗಳು ನೆರವಾಗಬಲ್ಲವು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net