ಏಳುಬೆಂಚಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವದಲ್ಲಿ ಶ್ರೀ ಮಾವಿನಹಳ್ಳಿ ಸಿದ್ದೇಶ್ವರ ರಂಗ ಸಂಸ್ಥೆ ಕಲ್ಚರಲ್ ಟ್ರಸ್ಟ್ ತಂಡದಿಂದ ನೃತ್ಯ ಪ್ರದರ್ಶಿಸಲಾಯಿತು.
ಕುರುಗೋಡು: ಜಾನಪದ ಗ್ರಾಮೀಣ ಜನರ ಜೀವನಾಡಿ ಆಗಿದ್ದು, ಪ್ರತಿಯೊಬ್ಬರೂ ಜಾನಪದದ ಉಳಿವಿಗೆ ಶ್ರಮಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಹೇಳಿದರು.
ಏಳುಬೆಂಚಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ್ಥೆ ಕಲ್ಚರಲ್ ಟ್ರಸ್ಟ್ ಮಾವಿನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವದಲ್ಲಿ ಮಾತನಾಡಿದರು. ನೋವು-ನಲಿವುಗಳನ್ನು ಹಿಂದಿನ ತಲೆಮಾರಿನ ಜನರು ಸಮನಾಗಿ ಸ್ವೀಕರಿಸಿ ಅನುಭವಿಸಿದ್ದು, ಅದನ್ನು ಜಾನಪದ ರೂಪದಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ. ಬದುಕನ್ನು ಅನುಭವಿಸುವ ಅಂದಿನ ಜನರ ರೀತಿ ಇಂದಿನ ಪೀಳಿಗೆಯಲ್ಲೂ ಕಾಣುವಂತಾಗಬೇಕು ಎಂದರು.