ನಮ್ಮ ಆಲೋಚನೆಗಳಿಂದ ಕೇಡು

ಹೂವಿನಹಡಗಲಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಿಂದ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಡಾ.ಮಾತಾ ಬಿ ಮಂಜಮ್ಮ ಜೋಗತಿ ಮಾತನಾಡಿದರು. ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ, ಪುರಸಭೆ ಮಾಜಿ ಅಧ್ಯಕ್ಷೆ ಗಂಟಿ ಜಮಿಲಾಬಿ ಇತರರಿದ್ದರು.
ಹೂವಿನಹಡಗಲಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಿಂದ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಡಾ.ಮಾತಾ ಬಿ ಮಂಜಮ್ಮ ಜೋಗತಿ ಮಾತನಾಡಿದರು. ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ, ಪುರಸಭೆ ಮಾಜಿ ಅಧ್ಯಕ್ಷೆ ಗಂಟಿ ಜಮಿಲಾಬಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾನಪದ
  • ಅಕಾಡೆಮಿ
  • ಮಾಜಿ ಅಧ್ಯಕ್ಷೆ
ಹೂವಿನಹಡಗಲಿ: ಎಲ್ಲರಿಗೂ ಬದುಕುವ ಸ್ವಾತಂತ್ರ್ಯವಿದ್ದು, ಮನುಷ್ಯರು ಮನುಷ್ಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳುವ ಅವಶ್ಯ ಇದೆ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದರು.
ಪಟ್ಟಣದ ಶಾದಿಮಹಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಸೋಮವಾರ ಆಯೋಜಿಸಿದ್ದ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ದೇವರು, ಸನ್ಯಾಸಿ, ಜೋಗತಿಯರು ಶಾಪ ಕೊಡುವುದರಿಂದ ಕೇಡು ಸಂಭವಿಸುವುದಿಲ್ಲ. ನಮ್ಮಲ್ಲಿನ ಆಲೋಚನೆಗಳಿಂದ ಕೇಡಾಗುತ್ತದೆ ಎಂದರು.
ತಂದೆ-ತಾಯಿಗಳ ಶ್ರಮವನ್ನು ಮಕ್ಕಳು ನೋಡಬೇಕು. ನಮ್ಮ ಮಕ್ಕಳಲ್ಲಿ ಶ್ರಮಸಂಸ್ಕೃತಿಯ ಪರಿಕಲ್ಪನೆ ಬೆಳೆಯಬೇಕು. ತಂದೆ-ತಾಯಿಗೆ ಎಂದಿಗೂ ನೋವನ್ನುಂಟು ಮಾಡಬಾರದು. ನಿಮ್ಮ ಮನೆಯಲ್ಲಿ ತೃತಿಯಲಿಂಗಿ ಮಗು ಜನಿಸಿದರೆ ಆ ಮಗುವಿಗೆ ಉತ್ತಮ ಶಿಕ್ಷಣ ನೀಡಿ, ಶಿಕ್ಷಣ ಪಡೆದ ಮಗು ಎಂದಿಗೂ ರಸ್ತೆಯಲ್ಲಿ, ಮಹಾನಗರಗಳಲ್ಲಿ ಭಿಕ್ಷಾಟನೆ ಅಥವಾ ಲೈಂಗಿಕವೃತ್ತಿ ಮಾಡಲು ತೆರಳುವುದಿಲ್ಲ. ಎಲ್ಲರನ್ನೂ ಪ್ರೀತಿಸುವ ಮತ್ತು ಗೌರವಿಸುವ ಗುಣಗಳು ಮನುಷ್ಯನಿಗೆ ಅತಿಮುಖ್ಯವಾಗಿವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಮಾತನಾಡಿ, ಧರ್ಮಸ್ಥಳ ಸಂಘದಿಂದ ಮಹಿಳೆಯರು ಸಶಕ್ತರಾಗಬೇಕೆಂದು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯರು ಸಶಕ್ತರಾದಾಗ ಮಾತ್ರ ದೇಶ ಶಕ್ತಿಯುತವಾಗುತ್ತದೆ ಎಂದರು.
ಉಪನ್ಯಾಸಕಿ ಡಾ.ಶೈಲಜಾ ಪವಾಡಶೆಟ್ಟರ್ ಅವರು ‘ಯುವ ಜನತೆಯಲ್ಲಿ ಸಂಸ್ಕೃತಿ-ಸಂಸ್ಕಾರವನ್ನು ರೂಢಿಸುವಲ್ಲಿ ಮಹಿಳೆಯರ ಪಾತ್ರ ’ ವಿಷಯದ ಕುರಿತು ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಗಂಟಿ ಜಮಿಲಾಬಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕಿ ಲಲಿತಮ್ಮ, ಸಂಘದ ಯೋಜನಾಧಿಕಾರಿ ಸುಬ್ರಮಣ್ಯ ವೈ.ಎಂ. ಸಮಯ್ವಯಾಧಿಕಾರಿ ರೇಷ್ಮಾ, ಜನಜಾಗೃತಿ ಸಮಿತಿ ಸದಸ್ಯರಾದ ಸಂತೋಷ್ ಜೈನ್, ಶಿವರಾಜ, ಸುಭಾಷ್, ಭರತೇಶ್ ಬಸ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net