ಪಕ್ಷವನ್ನು ತಳಹಂತದಿಂದ ಸಂಘಟಿಸಿ

ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಂಘಟನೆ ಸೃಜನ ಅಭಿಯಾನ ಕಾರ್ಯಕ್ರಮವನ್ನು ಎಐಸಿಸಿ ವೀಕ್ಷಕ ವೇಣುಗೋಪಾಲ್ ರಾವ್ ಉದ್ಘಾಟಿಸಿದರು. ಕೆಪಿಸಿಸಿ ವೀಕ್ಷಕರಾದ ಸುಭಾಷ್ ರಾಠೋಡ್, ಮರಿಯೋಜಿ ರಾವ್, ಆರತಿ ಚಂದ್ರಶೇಖರ, ಸೂರಜ್ ತಿವಾರಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರನಾಯ್ಕ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ವೀಕ್ಷಕ ವೇಣುಗೋಪಾಲ್ ರಾವ್ ಸಲಹೆ
  • ಹೂವಿನಹಡಗಲಿ ಕಾಂಗ್ರೆಸ್ ಸೃಜನ ಅಭಿಯಾನ
ಹೂವಿನಹಡಗಲಿ: ಕಾಂಗ್ರೆಸ್‌ಗೆ ಕಾರ್ಯಕರ್ತರೇ ಶಕ್ತಿಯಾಗಿದ್ದು, ಪಕ್ಷವನ್ನು ತಳಹಂತದಿಂದ ಸಂಘಟಿಸಿ ಶಕ್ತಗೊಳಿಸಲು ಎಲ್ಲರೂ ಶ್ರಮಿಸಬೇಕು. ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಎಐಸಿಸಿ ವೀಕ್ಷಕ ವೇಣುಗೋಪಾಲ್‌ರಾವ್ ಹೇಳಿದರು.
ಕಾಂಗ್ರೆಸ್ ಸಂಘಟನೆ ಸೃಜನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯಗಳನ್ನು ಸ್ವೀಕರಿಸಿ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು. ಆದ್ದರಿಂದ ಎಲ್ಲರೂ ಪಕ್ಷ ಸಂಘಟಿಸುವ ಕೆಲಸವನ್ನು ಮಾಡಬೇಕು ಎಂದರು.
ಕೆಪಿಸಿಸಿ ವೀಕ್ಷಕ ಸುಭಾಷ್ ರಾಠೋಡ್ ಮಾತನಾಡಿ, ದೇಶದ ಆಡಳಿತವು ಅರಾಜಕತೆಯಿಂದ ಕೂಡಿದ್ದು, ನಾನಾ ವಲಯಗಳು ಹಾಗೂ ರಾಜಕೀಯ ಚಟುವಟಿಕೆಗಳು ಸಂವಿಧಾನದ ಆಶಯದಂತೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್, ಕೆಪಿಸಿಸಿ ವೀಕ್ಷಕರಾದ ಮರಿಯೋಜಿ ರಾವ್, ಆರತಿ ಚಂದ್ರಶೇಖರ, ಸೂರಜ್ ತಿವಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಬಿ.ಹನುಮಂತಪ್ಪ, ಕೊಟ್ರೇಶ, ಪ್ರಚಾರ ಸಮಿತಿ ಅಧ್ಯಕ್ಷ ಹಾಲೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net