ಸಮ್ಮೇಳನ ಶೀಘ್ರ ಆಯೋಜಿಸಿ

ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ 88ನೇ ಅಖಿಲ ಭಾರತ ಕನ್ನಡ ಸಮ್ಮೇಳನ ಆಯೋಜಿಸಲು ಒತ್ತಾಯಿಸಿ ಎಡಿಸಿ ಮಹಮ್ಮದ್ ಎನ್.ಜುಬೇರ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕಲ್ಯಾಣ ಸ್ವಾಮೀಜಿ, ಪ್ರಭು ಸ್ವಾಮೀಜಿ, ನಾನಾ ಸಂಘಟನೆ ಪದಾಧಿಕಾರಿಗಳಾದ ಸೌಮ್ಯರೆಡ್ಡಿ, ಕಲ್ಲುಕಂಭ ಪಂಪಾಪತಿ, ಬಿ.ಎಂ.ಪಾಟೀಲ್, ಹುಮಾಯಾನ್ ಖಾನ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಂಘಟನೆ
  • ಕಸಾಪ
  • ಸಮ್ಮೇಳನ
ಬಳ್ಳಾರಿ : ಜಿಲ್ಲೆಯಲ್ಲಿ ನಡೆಯಬೇಕಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶೀಘ್ರ ಆಯೋಜನೆಗೆ ಒತ್ತಾಯಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದ ನಾನಾ ಧರ್ಮದ ಗುರುಗಳು, ಗಣ್ಯರು, ಕನ್ನಡ ಪರ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ನೇತೃತ್ವದಲ್ಲಿ 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಆಯೋಜಿಸಲು ಕೂಡಲೇ ದಿನಾಂಕ ಘೋಷಣೆಯಾಗಬೇಕು. ಸಮ್ಮೇಳನದ ಪೂರಕ ತಯಾರಿಗಳ ಕುರಿತಾದ ನಿರ್ಣಯಗಳನ್ನು ಸಿಎಂ ಸಿದ್ದರಾಮಯ್ಯ ಮೊದಲ ಅದ್ಯತೆಯಾಗಿ ತೆಗೆದುಕೊಂಡು ಗಡಿಭಾಗದಲ್ಲಿ ನಡೆಯುವ ಕನ್ನಡ ನುಡಿ ಹಬ್ಬದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಬೇಕು ಎಂದು ಕಸಾಪ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು. ಬಳಿಕ ಜಿಲ್ಲಾ ಕಸಾಪದೊಂದಿಗೆ, ನಾನಾ ಮಠಗಳು ಸ್ವಾಮೀಜಿಗಳು, ಸಂಘಟನೆ ಪದಾಧಿಕಾರಿಗಳೊಂದಿಗೆ ಎಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net