ಮತದಾರರ ಅಕ್ಷೇಪಣೆ ಸಲ್ಲಿಕೆಗೆ ಅವಕಾಶ

ನಾಗೇಂದ್ರ ಪ್ರಸಾದ್
ನಾಗೇಂದ್ರ ಪ್ರಸಾದ್
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ಮತಗಟ್ಟೆ

ಬಳ್ಳಾರಿ :

ಈ ಹಿಂದೆ ಜಿಲ್ಲೆಯ ಮತದಾರರ ಕರಡು ಪಟ್ಟಿಯಲ್ಲಿ 12,29,586 ಮತದಾರರರಿದ್ದು, ಪ್ರಸ್ತುತ 10,06,307 ಜನರಿದ್ದಾರೆ. ಶೇ.81.84 ರಷ್ಟು ಮತದಾರರು ನೇರವಾಗಿ ಎಸ್‌ಐಆರ್ ಪ್ರಕ್ರಿಯೆ ಪರಿಶೀಲನೆಗೆ ಒಳಗಾಗಿದ್ದಾರೆ ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.

ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಟ್ಟು ಮತದಾರರಲ್ಲಿ 4,94,371 ಪುರುಷರು, 5,11,740 ಮಹಿಳೆಯರು ಹಾಗೂ 196 ತೃತೀಯ ಲಿಂಗಿ ಮತದಾರರಿದ್ದಾರೆ. ಇದರಲ್ಲಿ ಯುವ ಮತದಾರರು (18-19 ವರ್ಷ) 17,767, ಹಿರಿಯ ನಾಗರಿಕರು (80 ವರ್ಷಕ್ಕೂ ಮೇಲ್ಪಟ್ಟ) 12,607, ವಿಶೇಷ ಚೇತನರು 13,288, ಸೇವಾ ಮತದಾರರು 183, ಹೊಸದಾಗಿ ಸಲ್ಲಿಕೆಯಾದ ಫಾರ್ಮ್ 06 ಅರ್ಜಿಗಳು 7,841 ಒಳಗೊಂಡಿವೆ. 1,200ಕ್ಕಿಂತ ಹೆಚ್ಚು ಮತದಾರರಿರುವ ಕಡೆ 33 ಹೆಚ್ಚುವರಿ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 1,260ಕ್ಕೆ ಏರಿಕೆಯಾಗಿದೆ ಎಂದರು.

ನೂತನ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವಿಕ್ಷ ಣೆಗೆ ಲಭ್ಯವಿದೆ. ಹಕ್ಕು ಮತ್ತು ಅಕ್ಷೇಪಣೆ ಸಲ್ಲಿಸಲು ಆ.24ರಿಂದ ಸೆ.23ರವರೆಗೆ, ನೋಟೀಸ್ ಹಂತ ಹಾಗೂ ಅಕ್ಷೇಪಣೆಗಳ ವಿಲೇವಾರಿ ಮಾಡಲು ಆ.24ರಿಂದ ಅ. 22ರವರೆಗೆ ಅವಕಾಶ ಕಲ್ಪಿಸಿದೆ. ಅಂತಿಮ ಮತದಾರರ ಪಟ್ಟಿಯನ್ನು ಅ.27ರಂದು ಪ್ರಕಟಿಸಲಾಗುವುದು ಎಂದರು.

ಕ್ಷೇತ್ರವಾರು ಮತದಾರರು: ಕಂಪ್ಲಿ 2,04,792, ಸಿರಗುಪ್ಪ 1,96,173, ಬಳ್ಳಾರಿ ಗ್ರಾಮೀಣ 1,99,972, ಬಳ್ಳಾರಿ ನಗರ 2,02,641 ಹಾಗೂ ಸಂಡೂರು 2,02,729 ಸೇರಿ ಒಟ್ಟಾರೆ 10,06,307 ಮತದಾರರಿದ್ದಾರೆ. ಪರಿಶೀಲನೆ ವೇಳೆ ಕಂಡುಬರದ 49,700, ಶಾಶ್ವತ ವಲಸೆ 1,02,151, ಎರಡು ಕಡೆ ಹೆಸರು ಹೊಂದಿರುವವರು 21,472, ಮೃತಪಟ್ಟವರು 41,144 ಹಾಗೂ ಇತರೆ 8,792 ಸೇರಿ ಒಟ್ಟು 2,23,279 ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿವರಿಸಿದರು.
ನಗರದಲ್ಲಿ ಸರ್ಕಾರಿ ಸ್ಥಳ ಒತ್ತುವರಿ ತೆರವು ಕಾರ್ಯ ನಡೆಸಲಾಗುತ್ತಿದೆ. ಈವರೆಗೆ 534ಕೋಟಿ ರೂ. ಮೌಲ್ಯದ 126 ಎಕರೆ ಸ್ಥಳದಲ್ಲಿನ ಒತ್ತುವರಿ ತೆರವುಗೊಳಿಸಲಾಗಿದೆ. ಕಾರ್ಯಚರಣೆ ಮುಂದುವರೆಯಲಿದೆ. ಒಂದು ವೇಳೆ ಮರು ಒತ್ತೂವರಿ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಎಡಿಸಿ ಮಹಮ್ಮದ್ ಎನ್.ಜುಬೇರ್, ಎಸಿ ಎಚ್.ಡಿ.ರಾಜೇಶ್, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net