ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆಯೇ ಶಕ್ತಿ

ಕೂಡ್ಲಿಗಿಯಲ್ಲಿ ಎಐಸಿಸಿ ನೇತೃತ್ವದಲ್ಲಿ ನಡೆದ ಸಂಘಟನ ಸೃಜನ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ, ತೆಲಂಗಾಣ ರಾಜ್ಯದ ಸಲಹೆಗಾರ ಹರಕರ್ ವೇಣುಗೋಪಾಲ ರಾವ್ ಉದ್ಘಾಟಿಸಿದರು. ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಮಾಜಿ ಶಾಸಕ ಸಿರಾಜ್ ಶೇಖ್, ಕೆಪಿಸಿಸಿ ಪದಾಧಿಕಾರಿಗಳಾದ ಮರಿಯೋಜಿರಾವ್, ಆರತಿ ಚಂದ್ರಶೇಖರ, ಕೆಪಿಸಿಸಿ ಕಾರ್ಯದರ್ಶಿ ಸುಭಾಷ್ ರಾಥೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಗುರುಸಿದ್ದನ ಗೌಡ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ಕೆ.ಜಿ.ಕುಮಾರ ಗೌಡ ಇದ್ದರು.

Published on

ಕೂಡ್ಲಿಗಿ:

ಬಲಿಷ್ಟ ಸಂಘಟನೆಯೇ ಕಾಂಗ್ರೆಸ್ ಪಕ್ಷದ ಅತಿದೊಡ್ಡ ಶಕ್ತಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ತೆಲಂಗಾಣ ರಾಜ್ಯದ ಸಲಹೆಗಾರ ಹರಕರ್ ವೇಣುಗೋಪಾಲ ರಾವ್ ಹೇಳಿದರು.

ಅನುಬಂಧ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಎಐಸಿಸಿ ನೇತೃತ್ವದಲ್ಲಿ ನಡೆದ ಸಂಘಟನ ಸೃಜನ ಅಭಿಯಾನ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಹಿರಿಯ ಮುಖಂಡರ ಅಭಿಪ್ರಾಯಕ್ಕೆ ಎಐಸಿಸಿ ಮಹತ್ವ ನೀಡುತ್ತಿರುವುದು ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಹಾಗೂ ಸಂಘಟನಾ ಬದ್ಧತೆಗೆ ಸಾಕ್ಷಿಯಾಗಿದೆ. ಸಂಘಟನೆ ಇನ್ನಷ್ಟು ಸದೃಢಗೊಳ್ಳಬೇಕಾದರೆ ಅನುಭವ, ಸಾಮರ್ಥ್ಯ ಹಾಗೂ ಪಕ್ಷದ ಸಿದ್ಧಾಂತಗಳಿಗೆ ಬದ್ಧತೆಯಿರುವ ನಾಯಕತ್ವದ ಅವಶ್ಯಕತೆ ಇದೆ. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾರ್ಯಕರ್ತರನ್ನು ಬಲಪಡಿಸುವ ಗುರಿಯನ್ನು ಸಂಘಟನ ಸೃಜನ ಅಭಿಯಾನ ಹೊಂದಿದೆ ಎಂದು ತಿಳಿಸಿದರು.
ಜಿಲ್ಲೆ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಅಮೂಲ್ಯ ಅಭಿಪ್ರಾಯಗಳನ್ನು ಸಮಿತಿ ಮುಂದೆ ಮಂಡಿಸಿ, ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವ ಕುರಿತು ಸಮಾಲೋಚನೆ ನಡೆಸಿದರು.
ಕೆಪಿಸಿಸಿ ಪದಾಧಿಕಾರಿಗಳಾದ ಮರಿಯೋಜಿರಾವ್, ಆರತಿ ಚಂದ್ರಶೇಖರ, ಕೆಪಿಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸುಭಾಷ್ ರಾಥೋಡ್, ಕಾಂಗ್ರೆಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್, ಶಾಸಕ ಡಾ.ಎನ್.ಟಿ. ಶ್ರೀನಿವಾಸ ಮಾತನಾಡಿದರು. ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ಧನಗೌಡ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ಕೆ.ಜಿ. ಕುಮಾರಗೌಡ, ಕಾವಲಿ ಶಿವಪ್ಪನಾಯಕ, ಗ್ಯಾರಂಟಿ ಅನುಷ್ಠಾನದ ತಾಲೂಕು ಅಧ್ಯಕ್ಷ ಜಿಲಾನ್, ಎರಿಸ್ವಾಮಿ ಹಾಗೂ ಕಾರ್ಯಕರ್ತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net