ನಗರದ ವಾರ್ಡ್ ನಂ.21ರಲ್ಲಿ ಟಿಎಸ್ ನಂ. 94ರಲ್ಲಿ 40 ಸೇಂಟ್ಸ್ ನಿವೇಶನ ಹಾಗೂ ನಲ್ಲಚೆರವು ಪ್ರದೇಶದ ಶಾದಿ ಮಹಲ್ ಹಿಂಭಾಗದಲ್ಲಿನ ವಾರ್ಡ್ ನಂ. 20ರಲ್ಲಿ ಟಿ.ಎಸ್. ನಂಬರ್ 941, 943 ಹಾಗೂ 945ಕ್ಕೆ ಸೇರಿದ 4.83 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸರ್ಕಾರಿಸ್ವತ್ತು ಎಂಬುದಾಗಿ ನಾಮಫಲಕ ಅಳವಡಿಸಲಾಯಿತು. ಎಡಿಸಿ ಮಹಮ್ಮದ್ ಎನ್.ಜುಬೇರ್, ಎಸಿ ಎಚ್.ಡಿ.ರಾಜೇಶ್ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.