ಬಳ್ಳಾರಿ : ನಗರದ ಹೊರವಲಯದ ನಾನಾ ಸರ್ವೇ ನಂಬರ್‌ಗಳ ಒಟ್ಟು 15.05 ಎಕರೆ ಒತ್ತುವರಿಯಾಗಿದ್ದ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿ ಸ್ವಾಧೀನ ಪಡಿಸಿಕೊಳ್ಳಲಾಯಿತು.
ಸರ್ವೇ ನಂ. 977ರ 13.92ಎಕರೆ ಹಾಗೂ ಸರ್ವೇ ನಂ. 1.13 ಎಕರೆ ಸೇರಿದಂತೆ ಒಟ್ಟಾರೆ 15.05 ಎಕರೆ ಒತ್ತುವರಿಯಾದ ಜಮೀನನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸರ್ಕಾರಿ ಜಮೀನು ಎಂಬುದಾಗಿ ನಾಮಫಲಕ ಅಳವಡಿಸಲಾಯಿತು. ಈ ಭೂಮಿಯೂ ಐಜಿಪಿ ಅವರ ನಿವಾಸ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ.