ನಿಟ್ಟೂರಿನಲ್ಲಿ ಸೋಮವಾರ ಬೇಡರ ಕಣ್ಣಪ್ಪ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಡಾ. ಪ್ರಸನ್ನಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿದರು. ಸಿದ್ದಾನಂದೀಶ್ವರ ಶಿವಾಚಾರ್ಯರು, ಮುಖಂಡರಾದ ಎಚ್.ಟಿ. ಅಶೋಕಪ್ಪ, ಡಿ. ಭರಮಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಸ್. ರೇವಣಸಿದ್ದಪ್ಪ, ಗಿಡ್ಡಳ್ಳಿ ನಾಗರಾಜ, ಎಚ್.ಟಿ. ಶಿವಯೋಗಿ, ಎಚ್.ಟಿ. ಹನುಮಂತ, ಮೂಲಿಮನಿ ಹನುಮಂತಪ್ಪ, ಹುಲಿ ರಮೇಶ, ಎಚ್.ಟಿ. ಪ್ರಭು ಸೇರಿದಂತೆ ಇತರರು ಉಪಸ್ಥಿತರಿದ್ದರು.
Published on:
Copied
Follow Us
ಹರಪನಹಳ್ಳಿ: ಶಿವನ ಪರಮ ಭಕ್ತ ಬೇಡರ ಕಣ್ಣಪ್ಪ ಶಿವಭಕ್ತಿಗೆ ಸಾಟಿಯಾದ ಮತ್ತೊಬ್ಬ ಭಕ್ತನನ್ನು ಹುಡುಕಲು ಸಾಧ್ಯವಿಲ್ಲ ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ನಿಟ್ಟೂರಿನಲ್ಲಿ ಸೋಮವಾರ ಶಿವಭಕ್ತ ಬೇಡರ ಕಣ್ಣಪ್ಪ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶಾಸ್ತ್ರದ ಜ್ಞಾನವಿಲ್ಲದಿದ್ದರೂ ಕೇವಲ ಶುದ್ಧ ಪ್ರೀತಿ ಮತ್ತು ನಂಬಿಕೆಯಿಂದ ಶಿವಲಿಂಗಕ್ಕೆ ತನ್ನ ಕಣ್ಣುಗಳನ್ನೇ ಅರ್ಪಿಸಿದವವರು ಕಣ್ಣಪ್ಪ. ಇವರ ಭಕ್ತಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಮೋಕ್ಷ ಕರುಣಿಸಿದನೆಂದು ನಂಬಲಾಗಿದೆ. ಭಗವಂತನನ್ನು ಅರಿತಾಗ ಮಾತ್ರ ಅರಿವಿನ ಜ್ಞಾನ ಉಂಟಾಗುತ್ತದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಮಾತನಾಡಿ, ಶಿವನಿಗೆ ಮಾಂಸಾಹಾರವನ್ನೇ ನೈವೇದ್ಯವನ್ನಾಗಿ ಅರ್ಪಿಸಿ, ಹರನು ಪರೀಕ್ಷಿಸಿದಾಗ ತನ್ನೆರಡು ಕಣ್ಣುಗಳನ್ನೇ ನೀಡಿ ಮುಗ್ಧ ಭಕ್ತಿ ಮೆರೆದವರು ಬೇಡರ ಕಣ್ಣಪ್ಪ. ನಮ್ಮದು ಸನಾತನ ಸಂಸ್ಕೃತಿಯಾಗಿದ್ದು, ದೇಗುಲ ಆರಾಧನೆ ಪರಂಪರೆ ಯನ್ನು ಯುವಕರು ಪಾಲಿಸಿಕೊಂಡು ಹೋಗಬೇಕು. ಭಕ್ತಿಯಿಂದ ಆರಾಧಿಸಿದರೆ ಆತ್ಮಸ್ಥೈರ್ಯ ಹಾಗೂ ಶಾಂತ ರೀತಿಯಿಂದ ಎಲ್ಲವನ್ನೂ ಎದುರಿಸುವ ಧನಾತ್ಮಕ ಶಕ್ತಿ ಸಿಗಲಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ ಮಾತನಾಡಿ, ಬೇಡರ ಕಣ್ಣಪ್ಪ ಭಗವಾನ್ ಶಂಕರನ ಪರಮಾಪ್ತ ಭಕ್ತರಲ್ಲಿ ಒಬ್ಬ. ಬೇಡ ಸಮುದಾಯಕ್ಕೆ ಸೇರಿದ ಇವರು ಸರಳ ಬೇಟೆಗಾರರಾಗಿದ್ದರೂ, ಶಿಕ್ಷಣ ಮತ್ತು ಶಾಸ್ತ್ರಜ್ಞಾನವಿಲ್ಲದಿದ್ದರೂ ಭಕ್ತಿ ಮಾತ್ರ ಅತ್ಯಂತ ಶುದ್ಧವಾಗಿತ್ತು. ಸಮಾಜದವರು ಶಿಕ್ಷಣವಂತರಾಗಿ ಸಂಸ್ಕಾರವಂತರಾಗಬೇಕು ಎಂದು ತಿಳಿಸಿದರು.
ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಕಂಚಿಕೇರಿ ಜಯಲಕ್ಷ್ಮೀ, ವಾಲ್ಮೀಕಿ ನಾಯಕ ಮಹಿಳಾ ಘಟಕದ ಅಧ್ಯಕ್ಷೆ ಎಚ್.ಟಿ. ವನಜಾಕ್ಷಮ್ಮ, ವಾಲ್ಮೀಕಿ ಸಮಾಜದ ಕಾರ್ಯದರ್ಶಿ ಎಚ್.ಕೆ. ಮಂಜುನಾಥ ಮಾತನಾಡಿದರು.