ಟಿಕೆಟ್ ಹಂಚಿಕೆ ಗೊಂದಲಗಳಿಲ್ಲ

ಈ.ತುಕಾರಾಮ್
ಈ.ತುಕಾರಾಮ್
Published on

ಪ್ರಮುಖ ಮುಖ್ಯಾಂಶಗಳು

  • ಹಂಚಿಕೆ
ಬಳ್ಳಾರಿ : ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಟಿಕೆಟ್ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ. ಅಂತಿಮವಾಗಿ ಹಿರಿಯ ನಾಯಕರು ಎಲ್ಲರ ಒಮ್ಮತದ ಮೇರೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಡೂರು ಉಪಚುನಾವಣೆ ಸಂದರ್ಭದಲ್ಲೂ ಆರಂಭದಲ್ಲಿ ಟಿಕೆಟ್ ವಿಚಾರವಾಗಿ ಸಣ್ಣಪುಟ್ಟ ಗೊಂದಲಗಳು ಕೇಳಿಬಂದಿದ್ದವು. ನಂತರ ಎಲ್ಲವೂ ಸುಗಮವಾಗಿ ಬಗೆಹರಿಯಿತು. ಅದೇ ರೀತಿ ಈಗಲೂ ಸರಿಯಾಗಲಿದೆ ಎಂದರು.
ಹಲವು ದಿನಗಳಿಂದ ವಿಪಕ್ಷಗಳು ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ, ಜನವರಿ ಕ್ರಾಂತಿ ಎಂದು ಹೇಳುತ್ತಲೇ ಬರಲಾಗುತ್ತಿದೆ. ಈಗ ಎಲ್ಲವೂ ಮುಗಿದು ಯುಗಾದಿ ಹಬ್ಬವೂ ಪೂರ್ಣಗೊಂಡಿದೆ. ಆದರೆ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಮುಂದೆಯೂ ಆಗುವುದಿಲ್ಲ, ಎಂಬುದಾಗಿ ಪರೋಕ್ಷವಾಗಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net