ಯೋಜನೆಗೆ ಸುಮಾರು 1,264 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ರೈಲ್ವೆ ಮಾರ್ಗವೂ ಸುಮಾರು 46 ಕಿ.ಮೀ. ನಷ್ಟು ವಿಸ್ತರಣೆಯಾಗಲಿದೆ. 2028- 29ರ ವೇಳೆಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ನೆರೆಯ ಆಂಧ್ರ ಹಾಗೂ ರಾಜ್ಯದ 99 ಗ್ರಾಮಗಳು ಮತ್ತು ಏಳು ಲಕ್ಷ ಜನರಿಗೆ ಯೋಜನೆಯಿಂದ ಸರಕು ಸಾಗಣೆ, ಸಾರ್ವಜನಿಕರು ಸಂಚರಿಸಲು ನೇರ ಅನುಕೂಲವಾಗಲಿದೆ. ಕಾಮಗಾರಿ ಪೂರ್ಣಗೊಂಡ ನಂತರ ಸರಕು ಸಾಗಣೆ ಸಾಮರ್ಥ್ಯವು ವರ್ಷಕ್ಕೆ 16.22 ಮಿಲಿಯನ್ ಟನ್‌ಗಳಷ್ಟು (ಎಂಟಿಪಿಎ) ಹೆಚ್ಚಾಗಲಿದೆ. ಈ ಯೋಜನೆಯು ಎರಡು ರಾಜ್ಯಗಳ ಕೈಗಾರಿಕಾ ಹಾಗೂ ಪ್ರಯಾಣಿಕ ಸಾರಿಗೆ ಕ್ಷೇತ್ರಕ್ಕೆ ದೊಡ್ಡ ಬಲ ನೀಡಲಿದೆ ಎಂದು ರೈಲ್ವೆ ಇಲಾಖೆ ಉದ್ದೇಶಿಸಿದೆ.