ಚರಿತ್ರೆಗೆ ವಸ್ತು ಸಂಗ್ರಹಾಲಯ ಸಹಕಾರಿ

ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತುಸಂಗ್ರಹಾಲಯದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮವನ್ನು ಕಾರ್ಯದರ್ಶಿ ಟಿ.ಜಿ. ವಿಠ್ಠಲ ಉದ್ಘಾಟಿಸಿದರು. ಉಪನ್ಯಾಸಕ ಒಬ್ಬಯ್ಯ, ನಿ.ಅಧಿಕಾರಿ ಮಹಾಬಳೇಶ್ವರಪ್ಪ ಇದ್ದರು.
ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತುಸಂಗ್ರಹಾಲಯದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮವನ್ನು ಕಾರ್ಯದರ್ಶಿ ಟಿ.ಜಿ. ವಿಠ್ಠಲ ಉದ್ಘಾಟಿಸಿದರು. ಉಪನ್ಯಾಸಕ ಒಬ್ಬಯ್ಯ, ನಿ.ಅಧಿಕಾರಿ ಮಹಾಬಳೇಶ್ವರಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಸ್ತುಸಂಗ್ರಹಾಲಯಗಳು ಅತ್ಯಂತ ಸಹಕಾರಿ
  • ಪಳೆಯುಳಿಕೆಗಳ ಚಿತ್ರಗಳನ್ನು ನೋಡುವುದು ಅನಿವಾರ್ಯ
ಬಳ್ಳಾರಿ : ಚರಿತ್ರೆ ಅರಿಯಲು ವಸ್ತುಸಂಗ್ರಹಾಲಯಗಳು ಅತ್ಯಂತ ಸಹಕಾರಿಯಾಗಿವೆ ಎಂದು ನಗರದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಕಾರ್ಯದರ್ಶಿ ಟಿ.ಜಿ. ವಿಠ್ಠಲ ಹೇಳಿದರು. ನಗರದ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತುಸಂಗ್ರಹಾಲಯದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತಿಹಾಸದ ಆಸಕ್ತರು ಪಠ್ಯಪುಸ್ತಕಗಳನ್ನು ಓದುವುದು ಮತ್ತು ಪಳೆಯುಳಿಕೆಗಳ ಚಿತ್ರಗಳನ್ನು ನೋಡುವುದು ಅನಿವಾರ್ಯವಿರಬಹುದು. ಆದರೆ ವಸ್ತು ಸಂಗ್ರಹಾಲಯಕ್ಕೆ ನೇರವಾಗಿ ಭೇಟಿ ನೀಡಿದಾಗ, ಇತಿಹಾಸದ ಕುರುಹುಗಳನ್ನು ಸಾಕ್ಷಾತ್ ನೋಡಿ ಮಾಹಿತಿ ಪಡೆದುಕೊಳ್ಳುವ ಅನುಭವವೇ ಬೇರೆಯಾಗಿರುತ್ತದೆ ಎಂದರು. ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಮಹಾಬಳೇಶ್ವರಪ್ಪ ಮಾತನಾಡಿ, ವಸ್ತುಸಂಗ್ರಹಾಲಯಗಳ ಮೂಲಕ ಸಾವಿರಾರು ವರ್ಷಗಳ ಹಿಂದಿನ ಮಾನವನ ಜನಜೀವನ ಮತ್ತು ಆಹಾರ ಪದ್ಧತಿಯ ಬಗ್ಗೆ ವಿವರವಾದ ಮಾಹಿತಿ ಪಡೆಯಬಹುದು.
ನಮ್ಮ ಭಾಗದ ಊರುಗಳ ಹೆಸರುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅವು ಅಂದು ಬೆಳೆದ ದವಸ-ಧಾನ್ಯಗಳು ಹಾಗೂ ಸಗಣಿ ಸುಟ್ಟ ಬೂದಿಯ ದಿಬ್ಬಗಳ ಹಿನ್ನೆಲೆಯನ್ನು ಅವಲಂಬಿಸಿ ಇಟ್ಟಿರುವುದು ತಿಳಿಯುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಯರಾದ ರೋಹಿಣಿ, ಅಶ್ವಿನಿ ಅವರು ಉನ್ನತ ಸಂಶೋಧನೆಗಳಲ್ಲಿ ವಸ್ತುಸಂಗ್ರಹಾಲಯಗಳ ಪಾತ್ರದ ಕುರಿತು ಬೆಳಕು ಚೆಲ್ಲಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net