ಪಾಲಿಕೆಯ ಇ - ಆಸ್ತಿ ಹಗರಣ

ಪಾಲಿಕೆಯ ಇ - ಆಸ್ತಿ ಹಗರಣ
ಪಾಲಿಕೆಯ ಇ - ಆಸ್ತಿ ಹಗರಣ
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿ
ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಐಪಿ ಅಡ್ರೆಸ್ ಬಳಸಿ ಇ-ಆಸ್ತಿ ತಂತ್ರಾಂಶದ ಮೂಲಕ ನಕಲಿ ದಾಖಲೆ ಸೃಷ್ಟಿಸಿ, ಸರ್ಕಾರದ ಆಸ್ತಿಯನ್ನು ಖಾಸಗಿಯವರ ಹೆಸರಿಗೆ ವರ್ಗಾಯಿಸಿದ ಆರೋಪದಡಿ ಆರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪಾಲಿಕೆಯ ವಲಯ-1 ಕಚೇರಿಯ ವಿಷಯ ನಿರ್ವಾಹಕ ಶ್ರೀಕಾಂತ್, ವಲಯ-2ರ ಕಂದಾಯ ನಿರೀಕ್ಷಕ ನರೇಶ್ ಕುಮಾರ, ಸಹಾಯಕ ಕಂದಾಯ ಅಧಿಕಾರಿ ವೆಂಕಟೇಶ್ವರಲು, ವಲಯ 3ರ ಕಂದಾಯ ನಿರೀಕ್ಷಕ ಮನೋಹರ್, ಕಂದಾಯ ಅಧಿಕಾರಿ ಲಕ್ಷ್ಮೀ ನಾರಾಯಣ ಹಾಗೂ ಮುಖ್ಯ ಕಚೇರಿಯ ಡಾಟ ಎಂಟ್ರಿ ಅಪರೇಟರ್ ಸ್ನೇಹ ವಿರುದ್ಧ ಸೇರಿ ಆರು ಅಧಿಕಾರಿಗಳ ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ವಿವಾದ : ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಐಪಿ ಅಡ್ರೆಸ್ ಬಳಸಿ ಇ-ಆಸ್ತಿ ತಂತ್ರಾಂಶದ ಲಾಗಿನ್ ಹಕ್ಕು ಪಡೆದು, ನಗರದ ಸರ್ವೇ ನಂ 564ಎ, 564ಬಿ ಹಾಗೂ ಹಾಲಿ ಟಿಎಸ್ ನಂಬರ್ 650ಕ್ಕೆ ಸೇರಿದ ಸುಮಾರು 11 ಎಕರೆ ವಿಸ್ತೀರ್ಣದ ಜಮೀನಿನ ಆಸ್ತಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಈ ಎಲ್ಲ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಅಲ್ಲದೆ, ಆಸ್ತಿ ವರ್ಗಾವಣೆ ಮತ್ತು ತೆರಿಗೆ ಪಾವತಿಯ ನೆಪದಲ್ಲಿ ಟಿ.ಪ್ರಭಾವತಿ ಅರ್ಜಿದಾರರಿಂದ 12 ಲಕ್ಷ ರೂ. ಪಡೆದಿದ್ದಾರೆ. ವಾಸ್ತವದಲ್ಲಿ ಬ್ಯಾಂಕ್‌ಗೆ ಕೇವಲ 1,217 ರೂ. ಮಾತ್ರ ಪಾವತಿಸಿ, ತಂತ್ರಾಂಶದಲ್ಲಿ ತಿದ್ದುಪಡಿ ಮಾಡಿ ನಕಲಿ ಚಲನ್ ಸೃಷ್ಟಿಸುವ ಮೂಲಕ ಅರ್ಜಿದಾರರಿಗೆ ಹಾಗೂ ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬುದಾಗಿ ಪಾಲಿಕೆಯ ವಲಯ 2ರ ಆಯುಕ್ತ ಶ್ರೀನಾಥ ಹೊಗಾಡೆ ದೂರಿನಲ್ಲಿ ವಿವರಿಸಿದ್ದಾರೆ.
======
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net