ಪಾಲಿಕೆಯ 39 ಸದಸ್ಯರು ಪೈಕಿ 18ಕ್ಕೂ ಹೆಚ್ಚು ಸದಸ್ಯರು ಮೇಯರ್ ಪಿ.ಗಾದೆಪ್ಪ ಅವರ ಮೇಲೆ ಮುನಿಸಿಕೊಂಡು, ಫೆ.16ಕ್ಕೆ ನಿಗದಿಯಾಗಿದ್ದ ಬಜೆಟ್ ಸಾಮಾನ್ಯ ಸಭೆಯನ್ನು ಮುಂದೂಡುವಂತೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ, ಮೇಯರ್ ಬೆಂಬಲಿತ ಕೆಲ ಸದಸ್ಯರು, ಮುನಿಸಿಕೊಂಡಿರುವ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಮನವೊಲಿಸಲು ಯತ್ನಿಸಿದರೂ, ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಫೆ.16ರಂದು ಸಾಮಾನ್ಯಸಭೆಗೆ ಬಹುತೇಕ ಸದಸ್ಯರು ಗೈರು ಹಾಜರಾಗಿ, ಕೋರಂ ಕೊರತೆ ಎದುರಾಗುವ ಸಾಧ್ಯತೆ ಇರುವುದನ್ನು ಮನಗಂಡಿರುವ ಮೇಯರ್ ಪಿ.ಗಾದೆಪ್ಪ ಅವರು, ಸಭೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಮುಂದೂಡಿ ಮುಂದಿನ ಸೋಮವಾರ ಫೆ.23ಕ್ಕೆ ನಿಗದಿಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.