ಬಳ್ಳಾರಿಯ ಆಯ್ಯಪ್ಪ ಸ್ವಾಮಿ ದೇವಸ್ಥಾನದ ಅಡ್ಡ ರಸ್ತೆಗೆ ಮುಂಡ್ಲೂರು ನರಸಿಂಹಪ್ಪ ರಸ್ತೆ ಎಂಬ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಶಾಸಕ ನಾರಾಭರತರೆಡ್ಡಿ, ನರಸಿಂಹಪ್ಪ ಅವರ ಪುತ್ರ ನಾರಾಯಣ್ ರಾವ್ ಚಿಟ್ಟಿ, ಮೊಮ್ಮಗ, ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್, ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯಡು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಇದ್ದರು.
ಬಳ್ಳಾರಿ : ಇಲ್ಲಿನ ರಾಘವೇಂದ್ರ ಕಾಲನಿಯ ಎರಡನೇ ಹಂತದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಡ್ಡ ರಸ್ತೆಗೆ ಮುಂಡ್ಲೂರು ನರಸಿಂಹಪ್ಪ ರಸ್ತೆ ಎಂಬ ನಾಮಫಲಕವನ್ನು ಶಾಸಕ ನಾರಾಭರತರೆಡ್ಡಿ ಮಂಗಳವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಶಾಸಕ ನಾರಾ ಭರತರೆಡ್ಡಿ, ಸಮಾಜ ಸೇವೆ, ಜನಪರ ಚಟುವಟಿಕೆಗಳು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮುಂಡ್ಲೂರು ನರಸಿಂಹಪ್ಪ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಈ ರಸ್ತೆ ನಾಮಕರಣವು ನಗರದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದ್ದು, ಅವರ ನೆನಪು ಸದಾ ಜನಮಾನಸದಲ್ಲಿ ಉಳಿಯುವಂತೆ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.