ಕೊಟ್ಟೂರು: ಹ್ಯಾಳ್ಯಾದಲ್ಲಿ ಬೆಂಕಿ ತಗುಲಿ 10ಕ್ಕೂ ಹೆಚ್ಚು ಮೇವಿನ ಕಣಗಳು ಶುಕ್ರವಾರ ಸುಟ್ಟಿವೆ. ಗಾಳಿಯಿಂದಾಗಿ ಬೆಂಕಿ ಪಕ್ಕದಲ್ಲಿನ ಬಣವೆಗಳಿಗೂ ಆವರಿಸಿದೆ. ಗ್ರಾಮಸ್ಥರು ಸ್ಥಳದಲ್ಲಿದ್ದ ಜಾನುವಾರು ಹಾಗೂ ಸಂಗ್ರಹಿಸಿಟ್ಟಿದ್ದ ಮೆಕ್ಕಜೋಳವನ್ನು ಬೇರೆಡೆ ಸ್ಥಳಾಂತರಿಸಿದರು.
ಕೊಟ್ಟೂರು ಹಾಗೂ ಕೂಡ್ಲಿಗಿಯಲ್ಲಿನ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿತು. ತಹಸೀಲ್ದಾರ್ ಅಮರೇಶ ಜಿ.ಕೆ., ಕಂದಾಯ ಇಲಾಖೆ ಶಿರಸ್ತೇದಾರ್ ಶಿವಕುಮಾರ, ಗ್ರಾಮ ಆಡಳಿತಾಧಿಕಾರಿ ಮಂಗಳಾ, ಪಿಡಿಒ ಗಂಗಾಧರ, ಕೃಷಿ ಇಲಾಖೆ ಅಧಿಕಾರಿ ಶಾಮಸುಂದರ್, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.