ನಾಲ್ವರಿಗೆ ಕಚ್ಚಿ ಗಾಯಗೊಳಿಸಿದ ಕೋತಿ

ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ವ್ಯಕ್ತಿಯ ಮೇಲೆ ಕುಳಿತಿರುವ ಕೋತಿ.
ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ವ್ಯಕ್ತಿಯ ಮೇಲೆ ಕುಳಿತಿರುವ ಕೋತಿ.
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳಾಂತರಿಸುವಂತೆ ಕಲ್ಲುಕಂಬ ಗ್ರಾಮಸ್ಥರ ಒತ್ತಾಯ
  • ಜನರ ಬೆನ್ನತ್ತಿ ಭಯಗೊಳಿಸುತ್ತಿವೆ
ಕುರುಗೋಡು: ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಕೋತಿಗಳ ಉಪಟಳದಿಂದ ಜನರು ರೋಸಿ ಹೋಗಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಗ್ರಾಮದಲ್ಲಿ ಹಲವು ದಿನಗಳಿಂದ ವಾನರ ಗುಂಪು ಬೀಡು ಬಿಟ್ಟಿದ್ದು, ನಿತ್ಯವೂ ಅಂಗಡಿ ಮುಂಗಟ್ಟು, ಶಾಲೆ, ಗ್ರಾಮ ಪಂಚಾಯಿತಿ, ಮನೆಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಬಸ್ ನಿಲ್ದಾಣದಲ್ಲಿ ನಿಲ್ಲುವ ಜನರ ಬೆನ್ನತ್ತಿ ಭಯಗೊಳಿಸುತ್ತಿವೆ. ಕರ್ನಾಟಕ ಪಬ್ಲಿಕ್ ಶಾಲೆಗೆ ಬುಧವಾರ ನುಗ್ಗಿದ ಕೋತಿ ಸಾಮಗ್ರಿ ಹಾಳು ಮಾಡುವ ಜತೆಗೆ ಶಿಕ್ಷಕ ಮತ್ತು ನಾಲ್ಕು ಮಕ್ಕಳನ್ನು ಕಚ್ಚಿ ಗಾಯಗೊಳಿದೆ.
ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ ತಿಳಿಸಿದರೆ ಗ್ರಾ.ಪಂ.ವಾಹನ ವ್ಯವಸ್ಥೆ ಕಲ್ಪಿಸಿದರೆ ಬೋನು ನೀಡಲಾಗುವುದು. ಜತೆಗೆ ಕೋತಿ ಹಿಡಿಯುವ ಖಾಸಗಿ ವ್ಯಕ್ತಿ ಕರೆಸಿ ಸೆರೆ ಹಿಡಿಯುವಂತೆ ಹೇಳುತ್ತಿದ್ದಾರೆ. ಕೂಡಲೇ ಕೋತಿ ಹಿಡಿದು ಸ್ಥಳಾಂತರಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಸ್ಡಿಎಂಸಿ ಅಧ್ಯಕ್ಷ ಎನ್.ಎರಿಸ್ವಾಮಿ, ಪ್ರಮುಖರಾದ ದೊಡ್ಡಪ್ಪ, ನಾಗರಾಜ, ಭೀಮೇಶ ಇತರರು ಎಚ್ಚರಿಸಿದ್ದಾರೆ.
"

ಕೋತಿ ದಾಳಿಯ ಬಗ್ಗೆ ದೂರು ಬಂದಿವೆ. ಗ್ರಾ.ಪಂ.ನಿಂದ ವಾಹನ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ. ಶೀಘ್ರ ಬೋನು ಅಳವಡಿಸಿ ಸ್ಥಳಾಂತರಿಸಲಾಗುವುದು. — ನಾಗರಾಜ ಆರ್‌ಎಫ್‌ಒ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net