ಈ ಪೈಕಿ 8735 ರೈತರು 4, 47,685 ಲಕ್ಷ ಕ್ವಿಂಟಾಲ್ ಹಾಗೂ ಹಿಂಗಾರು ಹಂಗಾಮಿನಲ್ಲಿ 5,601 ರೈತರು 3,01,383 ಲಕ್ಷ ಕ್ವಿಂಟಾಲ್ ಬೆಂಬಲ ಬೆಲೆಯಡಿ ಜೋಳ ಖರೀದಿಸಲಾಗಿದೆ. ಸದ್ಯ, ರಾಜ್ಯ ಸರ್ಕಾರ ನಿಗದಿಪಡಿಸಿರುವ ಬಿಳಿ ಜೋಳ (ಹೈಬ್ರೀಡ್) ಪ್ರತಿ ಕ್ವಿಂಟಾಲ್‌ಗೆ 3,699 ರೂ., ಬಿಳಿ ಜೋಳ (ಮಾಲ್ದಂಡಿ) 3,749 ರೂ. ದರ ನಿಗದಿ ಮಾಡಿದೆ. ಅದರಂತೆ ಪ್ರತಿ ರೈತರಿಂದ ಎಕರೆಗೆ 15 ಕ್ವಿಂಟಾಲ್‌ನಂತೆ ಗರಿಷ್ಠ 150 ಕ್ವಿಂಟಾಲ್ ವರೆಗೆ ಖರೀದಿಸಲಾಗಿದೆ.