ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ರಾಜ್ಯದ ರೈತರಿಂದ ಹಿಂಗಾರು, ಮುಂಗಾರು ಹಂಗಾಮಿನ ಜೋಳ ಖರೀದಿಸಿ 4 ತಿಂಗಳಾದರೂ ಹಣ ಪಾವತಿಯಾಗಿಲ್ಲ. ಕೆಲ ರೈತರಿಗೆ ಮುಂಗಾರು ಹಂಗಾಮಿನ ಜೋಳದ ಹಣ ಪಾವತಿಯಾಗಿದ್ದು, ಉಳಿದ ಬಹುತೇಕ ರೈತರಿಗೆ ಹಣ ಪಾವತಿಯಾಗಿಲ್ಲ. ಸಾಲ ಮಾಡಿ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಬೆಳೆ ಬೆಳೆದಿದ್ದು, ಹಣ ಪಾವತಿಯಾಗದ ಕಾರಣ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆದ ಬೆಳೆ ಕೈಗೆ ಸಿಗದೇ ಆರ್ಥಿಕ ತೊಂದರೆಯಾಗಿತ್ತು. ಇದೀಗ ಜೋಳ ಮಾರಿದರೂ ಅವರ ಖಾತೆಗೆ ಹಣ ಜಮೆಯಾಗದೆ ಕಂಗಾಲಾಗಿದ್ದಾರೆ. ಕೂಡಲೇ ಜೋಳದ ಹಣ ನೀಡುವಂತೆ ಒತ್ತಾಯಿಸಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಮಲ್ಲನಗೌಡ ಪಾಟೀಲ್, ಬಸವರಾಜ ಗೋಡಿಹಾಳ ಇದ್ದರು.