ಶಾಸಕರಿಂದ ಸಮುದಾಯದ ಒಗ್ಗಟ್ಟು ಒಡೆಯುವ ಹುನ್ನಾರ

ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
Published on
ಕುರುಗೋಡು: ಶಾಸಕ ಜೆ.ಎನ್ ಗಣೇಶ್ ದಲಿತ ಸಮುದಾಯದ ಒಗ್ಗಟ್ಟು ಒಡೆಯುವ ಹುನ್ನಾರ ನಡೆಸಿರುವುದು ಸರಿಯಲ್ಲ ಎಂದು ಡಾ.ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆ ಅಧ್ಯಕ್ಷ ಸುರೇಶ್ ಹೇಳಿದರು.

ಸಿದ್ದಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಮ್ ಜಯಂತಿ ಹಾಗೂ ಎಸ್‌ಎಸ್ ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಕ್ಷಾತೀತವಾಗಿ ಮಹನೀಯರ ಜಯಂತಿ ಆಚರಿಸಬೇಕು. ಜನಪ್ರತಿನಿಧಿಗಳ ಮಾತಿನಿಂದ ಸಮುದಾಯದ ಪ್ರಮುಖರು ಪ್ರೇರೇಪಿತರಾಗಬಾರದು. ಗ್ರಾಮದಲ್ಲಿ ಎರಡು ಗುಂಪಿಗೆ ಏಕಕಾಲಕ್ಕೆ ಜಯಂತಿ ಆಚರಣೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿರುವುದು ಉದ್ದೇಶ ಪೂರ್ವಕವಾಗಿದೆ ಎಂದು ದೂರಿದರು.
ಸೋಮಸಮುದ್ರ ಕೊಟ್ಟೂರುಸ್ವಾಮಿ ಶಾಖಾ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದು, ಅವರ ಭವಿಷ್ಯ ಉಜ್ವಲವಾಗಿರಲಿ. ವಿದ್ಯಾರ್ಥಿಗಳು ಉತ್ತಮ ನಡತೆ, ಆಚಾರ, ಸಂಸ್ಕೃತಿ ಅಳವಡಿಸಿಕೊಂಡು ಬದುಕಿನ ಸಾರ್ಥಕತೆ ಪಡೆಯಬೇಕು ಎಂದರು.
ಪ್ರಮುಖರಾದ ದಮ್ಮೂರ್ ಹನುಮಂತಪ್ಪ, ಎಚ್.ಕೆಂಚಪ್ಪ, ತಿಮ್ಮಾರೆಡ್ಡಿ, ಪಾಲಾಕ್ಷಿರೆಡ್ಡಿ, ವೈ.ಬಸವರಾಜ್, ಹನುಮೇಶ್ ರೆಡ್ಡಿ ಬಿಳಿಬಾಯಪ್ಪ, ಲಕ್ಷ್ಮಣ, ನಾಗರಾಜ, ಮಾರೆಪ್ಪ, ಉದ್ದಾಳ್ ಹನುಮಂತಪ್ಪ, ರಾಮಪ್ಪ ನಾಗರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net