ಸಚಿವ-ಸಂಸದರ ಅಣತಿಯಂತೆ ಗಣಿಗಾರಿಕೆ MINING

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಆರೋಪ
  • ಗಡಾದ್ ರಮೇಶ್‌ಗೆ ದಂಡ ಹಾಕಿದ್ದರೂ ಪ್ರಕರಣ ದಾಖಲಿಸಿಲ್ಲ
  • ಅಕ್ರಮ ಗಣಿಗಾರಿಕೆ ನಿಯಂತ್ರಿಸುವಂತೆ ಕೇಂದ್ರ ಸಚಿವ ವಿ.ಸೋಮಣ್ಣಗೆ ಮನವಿ
ಸಂಡೂರು: ತಾಲೂಕಿನ ಯರ‌್ರಯ್ಯನಹಳ್ಳಿಯ ಸರ್ವೇ ನಂ. 248ಎ ರಲ್ಲಿ ಅಕ್ರಮವಾಗಿ ಮರಂ ಗಣಿಗಾರಿಕೆ ಮಾಡಲಾಗಿದೆ. ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಗಡಾದ್ ರಮೇಶ್ ಎಂಬುವವರಿಗೆ 32 ಲಕ್ಷ ರೂ. ದಂಡ ಹಾಕಿದ್ದಾರೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.
ಬನ್ನಿಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಗಡಾದ್ ರಮೇಶ್‌ಗೆ ದಂಡ ಹಾಕಿದ್ದರೂ ಪ್ರಕರಣ ದಾಖಲಿಸಿಲ್ಲ. ನಿಗದಿತ ಸ್ಥಳದಿಂದ ಒಂದರಿಂದ ಎರಡು ಲಕ್ಷ ಟನ್ ಮರಂ ಅಕ್ರಮವಾಗಿ ಸಾಗಿಸಿರುವುದು ಕಂಡುಬಂದಿದೆ. ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಮ್, ಶಾಸಕಿ ಅನ್ನಪೂರ್ಣ ತುಕಾರಾಮ್ ಅಣತಿಯಂತೆ ಮರಂ ಗಣಿಗಾರಿಕೆ ನಡೆದಿದೆ ಎಂದು ದೂರಿದರು.
ರಾಜ್ಯದ ಎಲ್ಲ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ ಟ್ಯಾಗ್‌ಗೆ ಅವಕಾಶ ಕಲ್ಪಿಸಿದ್ದರೆ ತಾಲೂಕಿನ ಸುಶೀಲಾನಗರದಲ್ಲಿ ಮಾತ್ರ ಹಣ ಪಡೆಯಲಾಗುತ್ತಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ಲಾರಿಗಳು ಸಂಚರಿಸುತ್ತವೆ. ಒಂದು ದಿನಕ್ಕೆ ಲಕ್ಷಾಂತರ ಹಣ ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಮ್ ಅವರ ಜೇಬು ತುಂಬಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು. ಈ ಟೋಲ್‌ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್ ಬಳಕೆ ಮಾಡುವಂತೆ ಒತ್ತಾಯಿಸಿದರು.
ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಿಯಂತ್ರಿಸುವಂತೆ ಕೇಂದ್ರ ಸಚಿವ ವಿ.ಸೋಮಣ್ಣಗೆ ನಾನು ಮತ್ತು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ ಮನವಿ ಮಾಡಿದ್ದೆವು. ಕೂಡಲೇ ಸಚಿವರು ಸಂಬಂಧಿಸಿದವರಿಗೆ ಕರೆ ಮಾಡಿ ಮಾತನಾಡಿದರು. ಸಂಸದ ಈ.ತುಕಾರಾಮ್ ಹುಬ್ಬಳ್ಳಿಗೆ ಹೋಗಿ ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ ನಡೆದಿರುವ ಅಕ್ರಮವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಅನೇಕ ವರ್ಷಗಳಿಂದ ಸಂಡೂರಿನಲ್ಲಿ ಠಿಕಾಣಿ ಹೂಡಿರುವ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಇಲಾಖೆ ವಿಚಾರಣೆ ನಡೆಸಬೇಕು ಇಲ್ಲದಿದ್ದಲ್ಲಿ ರಾಜ್ಯಪಾಲರಿಗೆ ದೂರು ನೀಡುವುದಾಗಿ ಬಂಗಾರು ಹನುಮಂತು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ ಮಾತನಾಡಿ, ಬನ್ನಿಹಟ್ಟಿಯಲ್ಲಿ ಐದು ಕೋಟಿ ರೂ. ಹಾಗೂ ಯರ‌್ರಯ್ಯನಹಳ್ಳಿಯಲ್ಲಿ 10 ಕೋಟಿ ರೂ.ಮೊತ್ತದ ಅಕ್ರಮ ಮೊರಂ ಸಾಗಣೆ ಮಾಡಲಾಗಿದೆ. ಈ ಕುರಿತ ಎಲ್ಲ ದಾಖಲೆಗಳನ್ನು ಐಜಿ, ಎಸ್ಪಿಗೆ ನೀಡಲಾಗಿದ್ದು, ಆವರು ದೂರು ದಾಖಲು ಸಹ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಜಿಸಿಬಿ.ರಾಮಕೃಷ್ಣ, ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಇತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net