ಪ್ರತಿಯೊಬ್ಬರಿಗೆ ಹಾಲು ಅವಶ್ಯಕ

ಬಳ್ಳಾರಿಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ನಂದಿನಿ ಹಾಲಿನ ಶೇಖರಣೆ ಮತ್ತು ವೈಜ್ಞಾನಿಕ ಸಂಸ್ಕರಣಾ ವಿಧಾನ ವಿವರಿಸುವ ಕಿರುಚಿತ್ರ ಪ್ರದರ್ಶಿಸಲಾಯಿತು. ಒಕ್ಕೂಟದ ಎಂಡಿ ಎಸ್.ಸುದರ್ಶನರೆಡ್ಡಿ, ಐಸ್‌ಕ್ರೀಂ ಘಟಕದ ಅಪರ ನಿರ್ದೇಶಕ ರವಿಕಿರಣ್,  ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ವಿ. ನಾಗರಾಜ ಶರ್ಮ, ಪ್ರಾಂಶುಪಾಲೆ ಸರಸ್ವತಿ, ಒಕ್ಕೂಟದ ಸಹಾಯಕ ವ್ಯವಸ್ಥಾಪಕಿಗಳಾದ ಕೆ.ಆರ್. ಇಂದುಕಲಾ, ಜ್ಯೋತಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರಕಲಾ ಸ್ಪರ್ಧೆ

ಬಳ್ಳಾರಿ :

ಇತ್ತೀಚಿನ ಜೀವನದ ಪದ್ಧತಿಯಲ್ಲಿ ಮನುಷ್ಯರಿಗೆ ಹಾಲು ಅತ್ಯಂತ ಅವಶ್ಯಕ ಪೌಷ್ಟಿಕ ಆಹಾರವಾಗಿದೆ ಎಂದು ರಾಬಕೊವಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಎಸ್.ಸುದರ್ಶನರೆಡ್ಡಿ ಹೇಳಿದರು.

ನಗರದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಕರ್ನಾಟಕ ಸಹಕಾರ ಹಾಲು ಮಂಡಳಿ(ಕೆಎಂಎಫ್) ಹಾಗೂ ರಾಬಕೊವಿ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಕ್ಕೂಟವು ನಿತ್ಯ ಸರಾಸರಿ 2.50 ಲಕ್ಷ ಲೀ. ಗುಣಮಟ್ಟದ ಹಾಲು ಶೇಖರಿಸಿ, ವೈಜ್ಞಾನಿಕವಾಗಿ ಸಂಸ್ಕರಿಸಿ, ಸಂಪೂರ್ಣ ಕಲಬೆರಕೆ ರಹಿತ ಮತ್ತು ಸುರಕ್ಷಿತ ನಂದಿನಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಸರ್ಕಾರದ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಹಾಗೂ ಕ್ಷೀರಧಾರೆ ಯೋಜನೆಗಳನ್ನು ಒಕ್ಕೂಟವು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಲಿನ ಶೇಖರಣೆ ಮತ್ತು ವೈಜ್ಞಾನಿಕ ಸಂಸ್ಕರಣಾ ವಿಧಾನಗಳು ವಿವರಿಸುವ ಕಿರುಚಿತ್ರ ಪ್ರದರ್ಶಿಸಲಾಯಿತು. ನಂತರ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ನಂದಿನಿ ಉತ್ಪನ್ನಗಳ ಕುರಿತ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳು ವಿತರಿಸಲಾಯಿತು.
====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net