ದೇಶ ಕೆಣುಕುವವರಿಗೆ ತಕ್ಕ ಶಾಸ್ತಿಯಾಗಲಿ

ಕುರುಗೋಡು ತಾಲೂಕು ಆಡಳಿತ ಕಚೇರಿ ಮುಂದೆ ಹಿಂದು ಜಾಗರಣ ವೇದಿಕೆಯಿಂದ ಶನಿವಾರ ಪ್ರತಿಭಟನೆ ನಡೆಯಿತು. ವೇದಿಕೆ ಸದಸ್ಯ ಮಣಿಕಂಠ, ತಾಲೂಕು ಸಂಯೋಜಕರಾದ ಮಾರುತಿ, ಹುಲುಗಪ್ಪ, ಅಂಬರೇಷ್, ಮೇಲಗಿರಿ ಬಸವರಾಜ್, ವಿನಯ್, ನಟರಾಜ್ ಇತರರಿದ್ದರು.
ಕುರುಗೋಡು ತಾಲೂಕು ಆಡಳಿತ ಕಚೇರಿ ಮುಂದೆ ಹಿಂದು ಜಾಗರಣ ವೇದಿಕೆಯಿಂದ ಶನಿವಾರ ಪ್ರತಿಭಟನೆ ನಡೆಯಿತು. ವೇದಿಕೆ ಸದಸ್ಯ ಮಣಿಕಂಠ, ತಾಲೂಕು ಸಂಯೋಜಕರಾದ ಮಾರುತಿ, ಹುಲುಗಪ್ಪ, ಅಂಬರೇಷ್, ಮೇಲಗಿರಿ ಬಸವರಾಜ್, ವಿನಯ್, ನಟರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • protest
ಕುರುಗೋಡು: ದೆಹಲಿ ಸ್ಫೋಟ ಮಂತಾಧತೆಗೆ ಹಿಡಿದ ಕೈಗನ್ನಡಿಯಾಗಿದ್ದು, ಉಗ್ರರನ್ನು ಕೂಡಲೇ ಸಂಹರಿಸಬೇಕೆಂದು ಒತ್ತಾಯಿಸಿ ಹಿಂದು ಜಾಗರಣ ವೇದಿಕೆಯಿಂದ ಶನಿವಾರ ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಲ್ಲೇಶಪ್ಪಗೆ ಮನವಿ ಸಲ್ಲಿಸಲಾಯಿತು.
ಉತ್ತರ ಪ್ರಾಂತ ಸದಸ್ಯ ಶ್ರೀರಾಮುಲು ಮಾತನಾಡಿ, ಪುಲ್ವಾಮಾ, ಪಹಲ್ಗಾಮ್ ಸೇರಿದಂತೆ ಇತರೆಡೆ ನಡೆದ ಉಗ್ರರ ಪೈಶಾಚಿಕ ಕೃತ್ಯ ಮಾಸುವ ಮುನ್ನವೇ ದೆಹಲಿ ಸ್ಫೋಟ ನಡೆದಿದೆ. ಬಂಧಿತ ಶಹೀನ್ ಸೇರಿ ಇತರರಿಗೆ ಉಗ್ರರ ನಂಟಿದೆ ಎನ್ನಲಾಗುತ್ತಿದ್ದು, ಈ ಸ್ಫೋಟಕ್ಕೆ ಕಾರಣರಾದ ಪ್ರತಿಯೊಬ್ಬರನ್ನೂ ಹುಡುಕಿ ನಾಶ ಮಾಡಬೇಕು. ಭಾರತವನ್ನು ಕೆಣಕುವ ಎಲ್ಲರಿಗೂ ಇದು ಪಾಠವಾಗಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net