ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಲಿ

ಬಳ್ಳಾರಿಯ ಕನ್ನಡ ಭವನದಲ್ಲಿ ಕವಯಿತ್ರಿ ಟಿ.ಲೀಲಾವತಿ ಅವರ ‘ಒಲವು ಮೂಡಿದಾಗ ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಎಡಿಸಿ ಮಹಮ್ಮದ್ ಎನ್.ಜುಬೇರ್, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಪ್ರಾಂಶುಪಾಲೆ ಡಾ.ಶಾಂತಲಾ, ಕವಯಿತ್ರಿ ಟಿ.ಲೀಲಾವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾ ಪರಿಶಿಷ್ಟ ವರ್ಗಗಳ ಅಧಿಕಾರಿ ಶಾಶು, ಬಲಿಜ ಸಂಘದ ಅಧ್ಯಕ್ಷ ರಮೇಶ ಬುಜ್ಜಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಭಾವಗಳು ಕಾವ್ಯದಲ್ಲಿ ಒಡಮೂಡಿವೆ

ಬಳ್ಳಾರಿ :

ಉದ್ಯೋಗದ ನಡುವೆ ಸಾಹಿತ್ಯದ ಪ್ರೀತಿ ಬೆಳೆಸಿಕೊಂಡಿರುವ ಕವಯಿತ್ರಿ ಲೀಲಾವತಿ ಅವರು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬಸವ ಪಬ್ಲಿಕೇಷನ್ಸ್ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಕವಯಿತ್ರಿ ಟಿ.ಲೀಲಾವತಿ ಅವರ ‘ಒಲವು ಮೂಡಿದಾಗ ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒತ್ತಡದ ಬದುಕಿನಲ್ಲಿ ಅರಳಿದ, ಪ್ರೀತಿಯ ಪರಿಮಳವನ್ನು ತುಂಬಿದ ಭಾವಗಳು ಕಾವ್ಯದಲ್ಲಿ ಒಡಮೂಡಿವೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಶಾಂತಲಾ ಮಾತನಾಡಿ, ಈ ಕವನ ಸಂಕಲನದ ಕವನಗಳೆಲ್ಲವೂ ಸಹ ನಮ್ಮ ಸುತ್ತಮುತ್ತಲಿನ ಘಟನೆಗಳಿಗೆ ಸಂಬಂಧಿಸಿವೆ. ಕೌಟುಂಬಿಕ ಸಾಮರಸ್ಯ, ಒಲವು, ಸಾಮಾಜಿಕ ಕಳಕಳಿ ಕವನಗಳ ಜೀವಾಳವಾಗಿದ್ದು, ಕವಯತ್ರಿ ಲೀಲಾವತಿ ಅವರ ಸಾಹಿತ್ಯದ ಅಭಿರುಚಿ ಹೀಗೆ ಮುಂದುವರೆಯಲಿ ಎಂದರು.
ಡಾ. ಎನ್.ಎಸ್.ವೇಣುಗೋಪಾಲ ಮಾತನಾಡಿ, ಜ್ಞಾನದ ಹಸಿವನ್ನು ಹೊಂದಿದ ಸಾಹಿತಿ ಲೀಲಾವತಿ ಅವರು ’ಒಲವು ಮೂಡಿದಾಗ’ ಎಂಬ ಕವನ ಸಂಕಲನವನ್ನು ಹೊರ ತರುತ್ತಿರುವುದು ತುಂಬಾ ಸಂತೋಷದ ಸಂಗತಿ. ಉದ್ಯೋಗ ಮತ್ತು ಸಂಸಾರಗಳ ನಡುವೆ ಸಾಹಿತ್ಯದ ಸದಭಿರುಚಿಯ ಸಹವಾಸ. ಇದರ ಪ್ರತಿಫಲವೇ ಈ ಕವನ ಸಂಕಲನ ಮೂಡಿಬಂದಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ವೇದಿಕೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಶಾಂತಲಾ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು.
=====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net