ಸರ್ಕಾರದ ಯೋಜನೆ ಸದ್ಭಳಕೆಯಾಗಲಿ

ಕಂಪ್ಲಿ ಪುರಸಭೆಯಿಂದ ಚಿಂದಿ ಆಯುವ ತ್ಯಾಜ್ಯ ಸಂಗ್ರಾಹಕರಿಗೆ ಪಿಪಿಇ ಕಿಟ್ ವಿತರಿಸಲಾಯಿತು. ಅಧಿಕಾರಿಗಳಾದ ಜೀವನ್‌ಸ್ವಾತಿ, ಮೌನೇಶ್ವರ, ಸಿ.ಜಾನಕಿ, ಎಚ್.ಭೂಮಿಕಾ ಇತರರಿದ್ದರು.
ಕಂಪ್ಲಿ ಪುರಸಭೆಯಿಂದ ಚಿಂದಿ ಆಯುವ ತ್ಯಾಜ್ಯ ಸಂಗ್ರಾಹಕರಿಗೆ ಪಿಪಿಇ ಕಿಟ್ ವಿತರಿಸಲಾಯಿತು. ಅಧಿಕಾರಿಗಳಾದ ಜೀವನ್‌ಸ್ವಾತಿ, ಮೌನೇಶ್ವರ, ಸಿ.ಜಾನಕಿ, ಎಚ್.ಭೂಮಿಕಾ ಇತರರಿದ್ದರು.
Published on
ಕಂಪ್ಲಿ: ಚಿಂದಿ ಆಯುವಾಗ ವೈಯಕ್ತಿಕ ರಕ್ಷಣಾ ಸಾಧನ(ಪಿಪಿಪಿ)ಗಳನ್ನು ಬಳಸುವಲ್ಲಿ ಜಾಗೃತಿ ತೋರಬೇಕು ಎಂದು ಪುರಸಭೆ ಆರೋಗ್ಯ ನಿರೀಕ್ಷಕಿ ಜೀವನ್‌ಸ್ವಾತಿ ಹೇಳಿದರು.
ಪುರಸಭೆ ಸಭಾಂಗಣದಲ್ಲಿ ನಮಸ್ತೆ ದಿನ ಅಂಗವಾಗಿ ಪಟ್ಟಣದ ಚಿಂದಿ ಆಯುವ(ತ್ಯಾಜ್ಯ ಸಂಗ್ರಾಹಕ)ವರಿಗೆ ಪಿಪಿಇ ಕಿಟ್ ಮಂಗಳವಾರ ವಿತರಿಸಿ ಮಾತನಾಡಿದರು.
ಚಿಂದಿ ಆಯುವವರ ಯೋಗಕ್ಷೇಮ ಮತ್ತು ಸುರಕ್ಷತೆಗಾಗಿ ಸ್ಥಳೀಯ ಆಡಳಿತ ಹಲವು ಕ್ರಮ ಕೈಗೊಂಡಿದೆ. ಚಿಂದಿ ಆಯುವವರ ಆರೋಗ್ಯ ರಕ್ಷಣೆಗೆ ಸುರಕ್ಷಿತ ತ್ಯಾಜ್ಯ ನಿರ್ವಹಣೆಗಾಗಿ ಪಿಪಿಇ ಕಿಟ್ ವಿತರಿಸಿದೆ. ಇವರನ್ನು ಮುಖ್ಯವಾಹಿನಿಗೆ ಕರೆತರಲು ನಮಸ್ತೆ (ನ್ಯಾಷನಲ್ ಆ್ಯಕ್ಷನ್ ಫಾರ್ ಮೆಕನೈಸ್ಡ್ ಸ್ಯಾನಿಟೇಶನ್ ಇಕೋ ಸಿಸ್ಟಮ್)ಮೂಲಕ ನೋಂದಾಯಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಚಿಂದಿ ಆಯುವವರು ಆರೋಗ್ಯ ಸಂರಕ್ಷಣೆಯೊಂದಿಗೆ, ಮಕ್ಕಳ ಶಿಕ್ಷಣದತ್ತ ಜಾಗೃತಿ ತೋರಬೇಕು. ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಟ್ಟಣದ 40ಜನ ಚಿಂದಿ ಆಯುವವರಿಗೆ ನಶೆಮುಕ್ತ ಭಾರತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ವೇಳೆ ಕೋಲ್ಕತ ರವೀಂದ್ರ ಸದನನದಲ್ಲಿ ಆಯೋಜಿಸಿದ್ದ ನಮಸ್ತೆ ದಿನದ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಪ್ರದರ್ಶಿಸಲಾಯಿತು. ಪುರಸಭೆ ಆರೋಗ್ಯ ನಿರೀಕ್ಷಕ ಮೌನೇಶ್ವರ, ಸಮುದಾಯ ಸಂಚಾಲಕರಾದ ಸಿ.ಜಾನಕಿ, ಎಚ್.ಭೂಮಿಕಾ, ತಿಮ್ಮಮ್ಮ, ಗೌಡರ್ ನಾಗರತ್ನಾ, ಮೇಘಾ, ಚಿಂದಿ ಆಯುವ ಸಮುದಾಯದ ಪ್ರಮುಖರಾದ ಗಾಳೆಮ್ಮ, ಶ್ರೀರಾಮ್, ಮಾರೆಕ್ಕ, ನಾಗರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net