ಸಕಾಲದಲ್ಲಿ ಪ್ರಮಾಣಪತ್ರ ತಲುಪಲಿ

ಬಳ್ಳಾರಿಯ ಡಿಸಿ ಕಚೇರಿಯಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಿದ ಟ್ರಾಮ್ ಕೇರ್ ಆಸ್ಪತ್ರೆಯ ಉಪ ನೋಂದಣಾಧಿಕಾರಿ ಡಾ.ರಮೇಶ್ ಅವರಿಗೆ ಡಿಸಿ ನಾಗೇಂದ್ರ ಪ್ರಸಾದ್ ಅಭಿನಂದನಾ ಪತ್ರ ವಿತರಿಸಿದರು. ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ ಇದ್ದರು.
ಬಳ್ಳಾರಿಯ ಡಿಸಿ ಕಚೇರಿಯಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಿದ ಟ್ರಾಮ್ ಕೇರ್ ಆಸ್ಪತ್ರೆಯ ಉಪ ನೋಂದಣಾಧಿಕಾರಿ ಡಾ.ರಮೇಶ್ ಅವರಿಗೆ ಡಿಸಿ ನಾಗೇಂದ್ರ ಪ್ರಸಾದ್ ಅಭಿನಂದನಾ ಪತ್ರ ವಿತರಿಸಿದರು. ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ
  • ಬೆಳೆ ಅಂದಾಜು ಸಮೀಕ್ಷೆ
ಬಳ್ಳಾರಿ : ಜನನ ಮತ್ತು ಮರಣ ಪ್ರಮಾಣಪತ್ರಗಳು ಸಕಾಲದಲ್ಲಿ ಸಿಗದೇ ಇರುವುದರಿಂದ ಜನಸಾಮಾನ್ಯರ ದೈನಂದಿನ ಕೆಲಸಗಳಿಗೆ ಭಾರಿ ಹಿನ್ನಡೆಯಾಗುತ್ತಿದೆ ಎಂದು ಡಿಸಿ ನಾಗೇಂದ್ರ ಪ್ರಸಾದ್ ಕೆ., ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ, ಬೆಳೆ ಅಂದಾಜು ಸಮೀಕ್ಷೆ ಹಾಗೂ ಕೃಷಿ ಗಣತಿಯ ನಾನಾ ಹಂತಗಳ ಕುರಿತು ಆಯೋಜಿಸಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಜನನ ಅಥವಾ ಮರಣ ಸಂಭವಿಸಿದಾಗ ಅದನ್ನು ನಿಗದಿತ ಅವಧಿಯೊಳಗೆ ನೋಂದಾಯಿಸುವುದು ಕಡ್ಡಾಯವಾಗಿದೆ. ತಾಲೂಕುಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆಗಳು ಕಡ್ಡಾಯವಾಗಿ ಜರುಗಿಸಬೇಕು. ಕೆಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮಗುವಿನ ಜನನ ಅಥವಾ ವ್ಯಕ್ತಿಯ ಮರಣದ ಮಾಹಿತಿಯನ್ನು ನಿಗದಿತ ಸಮಯದೊಳಗೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡದಿರುವುದು ವಿಳಂಬಕ್ಕೆ ಕಾರಣವಾಗಿದೆ. ಆಧಾರ್ ಕಾರ್ಡ್, ವಿಳಾಸದ ಪುರಾವೆ ಮತ್ತು ಆಸ್ಪತ್ರೆಯ ದಾಖಲೆಗಳಲ್ಲಿ ಸಣ್ಣ ತಪ್ಪುಗಳಿದ್ದರೂ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಅಥವಾ ಮರುಪರಿಶೀಲನೆಗೆ ಕಳುಹಿಸಲಾಗುತ್ತಿದೆ ಎಂದರು.
ಬೆಳೆ ಅಂದಾಜು ಸಮೀಕ್ಷೆಗಳನ್ನು ಹೆಚ್ಚು ಪಾರದರ್ಶಕ ಹಾಗೂ ನಿಖರವಾಗಿಸಲು ತಂತ್ರಜ್ಞಾನ ಆಧಾರಿತ ವರದಿ ಸರಣಿ ಬಳಸಲಾಗುತ್ತಿದೆ. ಕಟಾವು ಪ್ರಯೋಗಗಳ ಐಡಿ ಗಳ ಮೂಲಕ ಪ್ರತಿಯೊಂದು ಕಟಾವು ಪ್ರಕ್ರಿಯೆಯ ಪ್ರಗತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಲಾಗುತ್ತಿದ್ದು, ತಪ್ಪುಗಳಿಗೆ ಆಸ್ಪದವಿಲ್ಲದಂತೆ ದತ್ತಾಂಶ ನಿರ್ವಹಣೆ ಮಾಡಬೇಕು ಎಂದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net