ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯಲಿ

ಬಳ್ಳಾರಿಯ ಗುರುದೇವ ನರ್ಸಿಂಗ್ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ವೈದ್ಯ ಡಾ.ಸುಮನ ಎಸ್.ಗಡ್ಡಿ, ಡಾ.ಸೋಮೇಶ್ವರ ಎಫ್. ಗಡ್ಡಿ, ಡಾ.ಬಿ.ಗದಗಿನ, ಕಪ್ಪಗಲ್ ಚಂದ್ರಶೇಖರ, ಎರ‌್ರಿಸ್ವಾಮಿ, ಅಬ್ದುಲ್ ಇದ್ದರು.
ಬಳ್ಳಾರಿಯ ಗುರುದೇವ ನರ್ಸಿಂಗ್ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ವೈದ್ಯ ಡಾ.ಸುಮನ ಎಸ್.ಗಡ್ಡಿ, ಡಾ.ಸೋಮೇಶ್ವರ ಎಫ್. ಗಡ್ಡಿ, ಡಾ.ಬಿ.ಗದಗಿನ, ಕಪ್ಪಗಲ್ ಚಂದ್ರಶೇಖರ, ಎರ‌್ರಿಸ್ವಾಮಿ, ಅಬ್ದುಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ
ಬಳ್ಳಾರಿ : ಸಾಮಾಜಿಕ ನ್ಯಾಯ ಜನ ಸಾಮಾನ್ಯರಿಗೆ ಪ್ರಯಾಸವಿಲ್ಲದೆ ದೊರೆತಾಗ ಮಾತ್ರ ಸ್ವಾಸ್ಥ , ಸುಸ್ಥಿರ ಮತ್ತು ಸಭದ್ರ ಭಾರತ ಕಟ್ಟುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ಈಡೇರುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.
ನಗರದ ಗುರುದೇವ ನರ್ಸಿಂಗ್ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಂಬೇಡ್ಕರ್ ಅವರ ಪ್ರಗತಿಪರ ಮತ್ತು ಒಳಗೊಳ್ಳುವಿಕೆ ಅಭಿವೃದ್ದಿಯ ಚಿಂತನೆಗಳು ಸಂವಿಧಾನದ ಆಧಾರ ತತ್ವಗಳಾಗಿವೆ. ವೈವಿಧ್ಯತೆಯಲ್ಲಿ ಏಕತೆ ಉಳಿಸಿಕೊಂಡ ಬಂದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ದುರ್ಬಲ ಜನ ಸಮೂಹಗಳ ಸಶಕ್ತಿಕರಣಕ್ಕೆ ಸಂವಿಧಾನದಲ್ಲಿ ವಿಪುಲ ಅವಕಾಶಗಳನ್ನು ಮಾಡಿಕೊಟ್ಟಿದ್ದಕ್ಕೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಲ್ಲಿ ಸುಧಾರಣೆಯ ಪರ್ವ ಆರಂಭವಾಗಿದೆ. ಬದಲಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಗತ್ಯಗಳಿಗೆ ಅನುಗುಣವಾಗಿ ಸಂವಿಧಾನವನ್ನು ಬದಲಾಯಿಸುವ ಅವಕಾಶ ಡಾ.ಅಂಬೇಡ್ಕರ ಕಲ್ಪಿಸಿದ್ದಾರೆ ಎಂದರು.
ವೈದ್ಯ ಡಾ. ಸುಮನ ಎಸ್.ಗಡ್ಡಿ ಮಾತನಾಡಿ, ರಾಷ್ಟ್ರೀಯ ಮುತ್ಸದ್ದಿಗಳ ಹಲವಾರು ವರ್ಷಗಳ ಸತತ ತಪಸ್ಸು, ತ್ಯಾಗ ಮತ್ತು ಹೋರಾಟದ ಫಲವಾಗಿ ಸ್ವಾತಂತ್ರ್ಯ ಬಂದಿದೆ. ಸಂವಿಧಾನದಲ್ಲಿ ಜಡತ್ವ ಮತ್ತು ನಮ್ಯತೆಯ ನಡುವೆ ಸಮತೋಲನ ಕಾಣಬಹುದು. ಶೋಷಿತರ ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಸ್ಥಾನಮಾನದಲ್ಲಿ ಸುಧಾರಣೆ ಕಂಡುಬರುತ್ತಿದ್ದರೂ ಸಾಮಾಜಿಕ ಸಂರಚನೆ ಬದಲಾಗದೇ ಇರುವುದು ಖೇದದ ಸಂಗತಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net