ಕಂಪ್ಲಿ: ಪಟ್ಟಣದ ಮಾರುತಿನಗರದ ಮಟ್ಟಿ ಮಾರೆಮ್ಮ ದೇವತೆ ಗಂಗೆಸ್ಥಳ ಮೆರವಣಿಗೆ ಮಂಗಳವಾರ ನಡೆಯಿತು. ಸುಡು ಬಿಸಿಲಲ್ಲಿ ಭಕ್ತರು ಬರಿಗಾಲಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತುಂಗಭದ್ರಾ ನದಿಯಿಂದ ಆರಂಭಗೊಂಡ ಗಂಗೆಸ್ಥಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಂಗಳವಾದ್ಯ, ಡೊಳ್ಳು ಕುಣಿತ ಹಾಗೂ ಜಾನಪದ ಕಲಾಪ್ರಕಾರಗಳು ಮೆರುಗು ನೀಡಿದವು. ಬುಧವಾರ ಕುಂಭೋತ್ಸವ ನಡೆಯಲಿದೆ.
ಮಟ್ಟಿ ಮಾರೆಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕಟ್ಟೆ ಬಸವರಾಜ, ಗೌರವಾಧ್ಯಕ್ಷ ಜಂಗಾ ವೀರೇಶ್, ಪ್ರಮುಖರಾದ ಜಂಗಾ ನಾಗರಾಜ, ಬಿ.ಸಿದ್ದಪ್ಪ, ಕರೆಂಟ್ ರವಿ, ಕಟ್ಟೆ ಮಲ್ಲೇಶ್, ಎಸ್.ರಮೇಶ, ಎ.ಶಿವು, ಯು.ಭೀಮು, ಕೊಟ್ರೇಶ್, ಅರ್ಚಕರಾದ ಅಂಜಿನಮ್ಮ, ಚಂದ್ರು ಇದ್ದರು.