ಜಿಲ್ಲೆಯಲ್ಲಿ ಜ.17 ಬಿಜೆಪಿ ಬೃಹತ್ ಪ್ರತಿಭಟನೆ

 ಬಿ.ಶ್ರೀರಾಮುಲು
ಬಿ.ಶ್ರೀರಾಮುಲು
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕರಣ
  • ಪ್ರಾಥಮಿಕ
  • ಸಹೋದರಿ
ಬಳ್ಳಾರಿ : ಬ್ಯಾನರ್ ಗಲಾಟೆ ಪ್ರಕರಣ ಖಂಡಿಸಿ ನಗರದಲ್ಲಿ ಜ.17ರಂದು ಬಿಜೆಪಿ ರಾಜ್ಯ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಗಲಾಟೆಯಲ್ಲಿ ಮೃತಪಟ್ಟ ಯುವಕನ ಪ್ರಕರಣವನ್ನು ಬಿಜೆಪಿ ಮೇಲೆ ತಿರುಚಲು ಹೋಗಿ ಕಾಂಗ್ರೆಸ್ ಎಡವಿದೆ. ಈಗಾಗಲೇ ಪ್ರಾಥಮಿಕ ತನಿಖೆಯಲ್ಲಿ ಶಾಸಕ ಭರತ್‌ರೆಡ್ಡಿ ಖಾಸಗಿ ಅಂಗರಕ್ಷಕರಿಂದ ಗುಂಡು ಸಿಡಿದಿದೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಆದರೂ ಈವರೆಗೂ ಭರತ್‌ರೆಡ್ಡಿಯನ್ನು ಬಂಧಿಸಿಲ್ಲ. ಆದರೆ, ಈ ಪ್ರಕರಣದಡಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರೆ ಹಾಗೂ ನಮ್ಮ ಸಹೋದರಿಯರ ವಿರುದ್ಧ ದೂರು ದಾಖಲಾಗುತ್ತಿವೆ ಎಂದರು.
ಈ ಪ್ರಕರಣದ ಪ್ರಮುಖ ಆರೋಪಿ ಸತೀಶ್‌ರೆಡ್ಡಿಯನ್ನು ಬೆಂಗಳೂರಿನಲ್ಲಿ ಇಟ್ಟು ರಾಜ್ಯಾಥ್ಯ ನೀಡುತ್ತಿದ್ದಾರೆ. ಶಾಸಕ ಭರತ್‌ರೆಡ್ಡಿ ಅನುಮತಿಯಿಂದ ಖಾಸಗಿ ಅಂಗರಕ್ಷಕ ಬುಲೆಟ್ ಸಿಡಿಸಿದ್ದಾನೆ. ಈ ಎಲ್ಲ ಬಗ್ಗೆ ಸರ್ಕಾರಕ್ಕೆ ಗಮನಕ್ಕೆ ಇದೆ. ಆದರೆ, ಶಾಸಕರನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟು ಹೆಸರು ಬರುತ್ತದೆ ಎಂಬುದಾಗಿ ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ. ಮೃತದೇಹ ಅಂತ್ಯಸಂಸ್ಕಾರ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಅವರು, ಮಾಜಿ ಸಿಎಂ ದಿ.ದೇವರಾಜ ಅರಸು ಅವರ ದೀರ್ಘಾವಧಿ ಕಾಲವಧಿಯ ದಾಖಲೆ ಮಾಡಿರುವುದಕ್ಕೆ ಅಭಿನಂದನೆ. ಆದರೆ, ದೇವರಾಜು ಅರಸು ಆಕಾಶದಂತೆ, ಸಿದ್ದರಾಮಯ್ಯ ಭೂಮಿಯಿದ್ದಂತೆ ಇಬ್ಬರ ನಡುವೆ ಹೋಲಿಕೆ ಬೇಡ ಎಂದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net