ಕಂಪ್ಲಿ: ಇಲ್ಲಿನ ಡಾ.ರಾಜಕುಮಾರ್ ಮುಖ್ಯರಸ್ತೆಯಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ (ಗುಡ್ಡದ ತಿಮ್ಮಪ್ಪ)ದೇವಸ್ಥಾನದಲ್ಲಿ ಭಾನುವಾರ ಅರ್ಚಕ ಪವನ್‌ಕುಮಾರ್ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.
ಅಧಿಕಮಾಸದ ಪ್ರಯುಕ್ತ ಶನಿವಾರ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ನಡೆಯಿತು. ವಿಗ್ರಹಗಳನ್ನು ತುಳಸಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸದ್ಭಕ್ತರಾದ ಡಿ.ಶ್ರೀಧರಶ್ರೇಷ್ಠಿ, ಟಿ.ರಮಾವೆಂಕಟರಮಣ, ಬಾಲವೆಂಕಟೇಶಲು, ವಿ.ರಾಮಲಿಂಗಯ್ಯ ಇತರರಿದ್ದರು..
ಧನ್ವಂತರಿ ಹೋಮ: ಪಟ್ಟಣದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಶಾಖಾಮಠದಲ್ಲಿ ಶನಿವಾರ ಅಧಿಕಮಾಸ ಪ್ರಯುಕ್ತ ಧನ್ವಂತರಿ ಹೋಮ ಶ್ರದ್ಧಾಭಕ್ತಿಯಿಂದ ನಡೆಯಿತು. ಅರ್ಚಕ ವಿಜಯೇಂದ್ರಾಚಾರ್ ಪೌರೋಹಿತ್ಯದಲ್ಲಿ ತೀರ್ಥ ಪ್ರಸಾದ ವಿನಿಯೋಗ ಸೇರಿ ನಾನಾ ಕಾರ್ಯಕ್ರಮ ನಡೆದವು. ರಾಯರ ಬೃಂದಾವನವನ್ನು ಪುಷ್ಪ, ತುಳಸಿಹಾರಗಳೊಂದಿಗೆ ಅಲಂಕರಿಸಲಾಗಿತ್ತು.
ಮಠದ ವಿಚಾರಣಾಕರ್ತ ಟಿ.ಕೊಟ್ರೇಶ, ವ್ಯವಸ್ಥಾಪಕ ಪುರುಷೋತ್ತಮಾಚಾರ್, ಗುರುರಾಜ ಸೇವಾ ಮಂಡಳಿ, ಸತ್ಯನಾರಾಯಣ ಮಹಿಳಾ ಭಜನಾ ಮಂಡಳಿಯವರು, ಸರ್ವ ಸಮುದಾಯಗಳ ಸದ್ಭಕ್ತರಿದ್ದರು.