ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ

ಹೂವಿನಹಡಗಲಿ ಗವಿಮಠದ ಗವಿಸಿದ್ದೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎಂಟು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಶ್ರೀ ಹಿರಿಶಾಂತವೀರ ಸ್ವಾಮೀಜಿ, ಉತ್ತಂಗಿಯ ಶ್ರೀ ಸೋಮಶಂಕರ ಸ್ವಾಮೀಜಿ, ನಾಗತಿಬಸಾಪುರ ಶ್ರೀ ಗಿರಿರಾಜ ಹಾಲಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಪಿ.ವಿಜಯಕುಮಾರ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಸದಸ್ಯ ಪಿ.ವಿಜಯಕುಮಾರ್ ಅಭಿಪ್ರಾಯ
  • ಹೂವಿನಹಡಗಲಿ ಉಚಿತ ಸಾಮೂಹಿಕ ವಿವಾಹ
ಹೂವಿನಹಡಗಲಿ: ಮಠಗಳು ಉಚಿತ ಸಾಮೂಹಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿವೆ ಎಂದು ಜಿಪಂ ಮಾಜಿ ಸದಸ್ಯ ಪಿ.ವಿಜಯಕುಮಾರ್ ಹೇಳಿದರು.
ಪಟ್ಟಣದ ಗವಿಸಿದ್ದೇಶ್ವರ ಶಾಖಾಮಠದ ಗವಿಸಿದ್ದೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿ, ಮಠಮಾನ್ಯಗಳು ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡುತ್ತಿವೆ ಎಂದರು.
ವಧು-ವರರು ಪರಸ್ಪರ ಅರಿತುಕೊಂಡು ಜೀವನ ನಡೆಸಬೇಕು. ಕೋಪ ಮಾಡಿಕೊಳ್ಳುವ ಬದಲಿಗೆ ಅರ್ಥಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಅದ್ದೂರಿ ಮದುವೆಗಳಿಗಿಂತ ಸರಳ ಹಾಗೂ ಉಚಿತ ಸಾಮೂಹಿಕ ಮದುವೆಯಾದವರೇ ಹೆಚ್ಚು. ಆಧುನಿಕ ಬದುಕಿಗೆ ಹೊಂದಿಕೊಳ್ಳುವುದರ ಜತೆಗೆ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಬಡವರು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಮಠ-ಮಾನ್ಯಗಳು ಉಚಿತ ವಿವಾಹಗಳನ್ನು ನಡೆಸುತ್ತಿವೆ. ಈ ನಾಡಿನಲ್ಲಿ ಮಠಗಳ ಅನ್ನ, ಅಕ್ಷರ ದಾಸೋಹ ಪರಿಣಾಮದಿಂದ ಅನೇಕರು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ ಎಂದರು.
ಎಂಟು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಸಂಜೆ ಪಟ್ಟಣದ ಹಂಪಸಾಗರ ರಸ್ತೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು. ಅಂಗೂರಿನ ಶ್ರೀ ಅಂಗೂರೇಶ್ವರ ಸ್ವಾಮೀಜಿ, ಉತ್ತಂಗಿಯ ಶ್ರೀ ಸೋಮಶಂಕರ ಸ್ವಾಮೀಜಿ, ನಾಗತಿಬಸಾಪುರದ ಶ್ರೀ ಗಿರಿರಾಜ ಹಾಲಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪನಾಯಕನಹಳ್ಳಿಯ ದೊಡ್ಡಬಸಯ್ಯ ಶಾಸ್ತ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net