ಹಗರಿಬೊಮ್ಮನಹಳ್ಳಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪದ್ಮಶಾಲಿ ಸಮಾಜದಿಂದ ಮಾರ್ಕಂಡೇಶ್ವರ ಜಯಂತಿ ಆಚರಿಸಲಾಯಿತು. ಸಮಾಜದ ಉಪಾಧ್ಯಕ್ಷ ಜೆ.ನಾಗರಾಜ, ಕಾರ್ಯದರ್ಶಿ ಜಾಣಾ ಸೋಮಶೇಖರ, ಖಜಾಂಚಿ ಗೋರಂಟ್ಲಿ ವಿರೂಪಾಕ್ಷಪ್ಪ, ನೇಕಾರ ಒಕ್ಕೂಟದ ಅಧ್ಯಕ್ಷ ಬಸವರಾಜ, ಮಲ್ಲಣ್ಣ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ಭಕ್ತ ಮಾರ್ಕಂಡೇಯ ಶಿವನ ಪರಮಭಕ್ತಿಯಿಂದ ಸಾವನ್ನೇ ಜಯಿಸಿದ್ದರು ಎಂದು ಪದ್ಮಶಾಲಿ ಸಮಾಜದ ತಾಲೂಕು ಅಧ್ಯಕ್ಷ ಜಾಣಾ ಅನಿಲ್ ಕುಮಾರ್ ಹೇಳಿದರು.
ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸಮಾಜದಿಂದ ಆಯೋಜಿಸಿದ್ದ ಭಕ್ತ ಮಾರ್ಕಂಡೇಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೈಕುಂಡ ಮಹರ್ಷಿಗಳ ಮಗನಾದ ಮಾರ್ಕಂಡೇಯಗೆ 16 ವರ್ಷಗಳ ಆಯುಷ್ಯವಿತ್ತು. ಅಚಲ ಭಕ್ತಿಯಿಂದ ಶಿವ ಪ್ರತ್ಯಕ್ಷನಾಗಿ ಯಮನನ್ನು ತಡೆದು ಮಾರ್ಕಂಡೇಯನನ್ನು ಚಿರಂಜೀವಿಯಾಗಿಸಿದ. ಭಗವಂತನಲ್ಲಿ ಅಚಲ ಭಕ್ತಿಯಿದ್ದರೆ ನಾವು ಸಾವಿಗೂ ಹೆದರುವ ಅಗತ್ಯವಿಲ್ಲ ಎಂದರು.