ಬಳ್ಳಾರಿ ರೈಲು ನಿಲ್ದಾಣದ ಮೂಲಕ ಸಾಗುತ್ತಿದ್ದ ಶಾಲಿಮಾರ್ ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲನ್ನು ಅಧಿಕಾರಿಗಳು ಪರಿಶೀಲಿಸಲಾಯಿತು. ಸಾಮಾನ್ಯ ಭೋಗಿಯಲ್ಲಿ ವಾರಸುದಾರರಿಲ್ಲದ ಮೂರು ಪಾಲಿಥಿನ್ ಚೀಲಗಳು ಪತ್ತೆಯಾಗಿದ್ದವು. ಪ್ರಯಾಣಿಕರನ್ನು ವಿಚಾರಿಸಿದರೂ ಅವು ಯಾರದ್ದೆಂದು ಯಾರು ಮಾಹಿತಿ ನೀಡಲಿಲ್ಲ. ಆ ಬಳಿಕ ಚೀಲಗಳನ್ನು ರೈಲಿನಿಂದ ಇಳಿಸಿ ಪರಿಶೀಲಿಸಿದಾಗ ಗಾಂಜಾ ಇರುವುದು ದೃಢಪಟ್ಟಿದೆ. ಸದ್ಯ, ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.