ಡಿ.16ರಂದು ಜೈಲಿನ ಆವರಣದ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಗೋಡೆ ಪಕ್ಕದಲ್ಲಿ ಚೆಂಡು ಬಿದ್ದಿದ್ದು ಪತ್ತೆಯಾಗಿದೆ. ಚೆಂಡು ದೊರೆತ ಸ್ಥಳ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅಪರಿಚಿತಯೊಬ್ಬ ಆವರಣಕ್ಕೆ ಚೆಂಡು ಎಸೆದಿರುವುದು ಕಂಡು ಬಂದಿದೆ. ಹೊರಗಡೆಯಿಂದ ಚೆಂಡು ತೂರಿದ್ದ ಜಾಗ ಪರಿಶೀಲಿಸಿದ ವೇಳೆ ಮತ್ತೊಂದು ಚೆಂಡು ಪತ್ತೆಯಾಗಿದೆ. ಎರಡು ಚೆಂಡುಗಳಲ್ಲಿ ಗಾಂಜಾ ರೀತಿಯ ವಸ್ತು ಪತ್ತೆಯಾಗಿರುವುದು ಕಂಡು ಬಂದಿದೆ.