ಬಜೆಟ್ ಮೇಲೆ ಹಲವು ನಿರೀಕ್ಷೆ

ಬಳ್ಳಾರಿಯ ರೈಲು ನಿಲ್ದಾಣದ ಹೊರನೋಟ
ಬಳ್ಳಾರಿಯ ರೈಲು ನಿಲ್ದಾಣದ ಹೊರನೋಟ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ
ಬಳ್ಳಾರಿ : ಪ್ರಸಕ್ತ ಸಾಲಿನ ಕೇಂದ್ರದ ಬಜೆಟ್‌ನಲ್ಲಿ ಜಿಲ್ಲೆಯ ಹೊಸ ರೈಲ್ವೆ ಯೋಜನೆ ಹಾಗೂ ಕೆಲವೊಂದು ಅಭಿವೃದ್ಧಿ ಕಾಮಗಾರಿಗಳು ಘೋಷಣೆಯಾಗುವ ನಿರೀಕ್ಷೆಗಳಿವೆ ಗರಿಗೆದರಿವೆ.
ಬಜೆಟ್ ಮಂಡಿಸಲಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಚೆಗೆ ಭೇಟಿ ನೀಡಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕೊಂಚಿಗೇರಿ ಗ್ರಾಮದಲ್ಲಿ ಒಣಮೆಣಸಿನಕಾಯಿ ಸಂಸ್ಕರಣ ಘಟಕಕ್ಕೆ ಚಾಲನೆ ನೀಡಿದ್ದರು. ಜತೆಗೆ ಬಜೆಟ್ ಸಂಬಂಧ ಅಧಿಕಾರಿಗಳ ಪೂರ್ವಭಾವಿ ಸಭೆ ಹಂಪಿಯಲ್ಲಿ ನಡೆಸಿದ್ದರು. ಇದರಿಂದ ಜಿಲ್ಲೆಯ ರೈಲ್ವೆ, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಕೊಡುಗೆ ಸಿಗುವ ನಿರೀಕ್ಷೆ ಹೆಚ್ಚಿದೆ.
ರೈಲ್ವೆ ಯೋಜನೆ : ರೈಲ್ವೆ ಹೋರಾಟ ಸಮಿತಿಗಳ ಮುಖಂಡರ ಬೇಡಿಕೆಗಳಂತೆ ಬಳ್ಳಾರಿ, ಹೊಸಪೇಟೆಯಿಂದ ವಯಾ ಕೊಟ್ಟೂರು, ಹರಿಹರ ಮಾರ್ಗವಾಗಿ ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಗೆ ರೈಲು ಸಂಚರಿಸಿಬೇಕಿದೆ. ಇದರಿಂದ ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಕೊಪ್ಪಳ, ಹೊಸಪೇಟೆ, ಬಳ್ಳಾರಿಯಿಂದ ವಯಾ ಗುಂತಕಲ್ ಮಾರ್ಗವಾಗಿ ವಂದೇ ಭಾರತ್ ರೈಲು ಬಿಡುವಂತೆ ಕೋರಲಾಗಿದೆ. ಜತೆಗೆ ಈ ಮೊದಲು ಇದ್ದ ಬೆಳಗಾವಿ ಮುನುಗುರು ಎಕ್ಸ್‌ಪ್ರೆಸ್ ರೈಲು ಪುನಃ ಆರಂಭಿಸಬೇಕಾಗಿದೆ. ಇದರಿಂದ ಕಲ್ಯಾಣ ಕರ್ನಾಟಕದ ಧಾರ್ಮಿಕ ಕ್ಷೇತ್ರ ಮಂತ್ರಾಲಯಕ್ಕೂ ಅನುಕೂಲ ಕಲ್ಪಿಸಿದಂತಾಗಲಿದೆ. ಅಲ್ಲದೆ, ಬಳ್ಳಾರಿ ನಗರದಲ್ಲಿ ಬೈಪಾಸ್ ರೈಲು ನಿಲ್ದಾಣವಾಗಬೇಕಾಗಿದೆ. ಬೆಂಗಳೂರು-ದಾವಣಗೆರೆ ರೈಲು ಸಂಚಾರ ಆರಂಭವಾದಲ್ಲಿ ಬಳ್ಳಾರಿಯಿಂದಲೂ ವಯಾ ಚಳ್ಳಕೆರೆ ಮಾರ್ಗವಾಗಿ ಬೆಂಗಳೂರು ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಲಿದೆ. ಈಗಾಗಲೇ ಕೆಲವೊಂದು ರೈಲುಗಳು ನಿಲ್ದಾಣಕ್ಕೆ ಹೋಗದೆ, ಬೈಪಾಸ್ ಮೂಲಕ ಸಂಚರಿಸುತ್ತಿದ್ದು, ರೈಲಲ್ಲಿದ್ದ ಪ್ರಯಾಣಿಕರು ಇಳಿದು, ಹತ್ತಲು ಸಮಸ್ಯೆ ಎದುರಿಸುತ್ತಿದಾರೆ. ಹೀಗಾಗಿ ಬೈಪಾಸ್ ರೈಲು ನಿಲ್ದಾಣ ನಿರ್ಮಿಸಬೇಕಾಗಿದೆ.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು, ಬಳ್ಳಾರಿ-ಸಿರಗುಪ್ಪ-ಸಿಂಧನೂರು ನೂತನ ರೈಲು ಮಾರ್ಗ ನಿರ್ಮಿಸುವುದಾಗಿ ಘೋಷಿಸಿದ್ದರು. ಕಳೆದ ಒಂದು ದಶಕದಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯು ಈಚೆಗೆ ಸರ್ವೆ ಕಾರ್ಯ ಮುಗಿದಿದೆ ಎನ್ನಲಾಗುತ್ತಿದೆ. ಜತೆಯಲ್ಲಿ ಪಾರಂಪರಿಕ ರೈಲು ನಿಲ್ದಾಣಗಳ ಪಟ್ಟಿಗೆ ಸೇರಿರುವ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಯೂ ಕಳೆದ ಎರಡು ವರ್ಷಗಳಿಂದ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನುದಾನ ಘೋಷಣೆಯಾದಲ್ಲಿ ಕಾಮಗಾರಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ನಗರ ಸುಧಾ ಕ್ರಾಸ್‌ನಲ್ಲಿ ಮೇಲ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಒಂದಡೆ ಇನ್ನೊಂದು ಆರಂಭವಾಗಿಲ್ಲ. ಎರಡನೇ ಗೇಟ್ ಬಳಿಯ ರೈಲು ಮೇಲ ಸೇತುವೆ ಕಳೆದೊಂದು ದಶಕದಿಂದ ನನೆಗುದಿಗೆ ಬಿದ್ದಿದೆ. ಗವಿಯಪ್ಪ ವೃತ್ತದಲ್ಲಿನ ಬೀಡ್ಜ್ ಅಗಲೀಕರಣ ಕಾಮಗಾರಿ ಈವರೆಗೂ ಆರಂಭವಾಗಿಲ್ಲ ಇದರಿಂದ ವಾಹನ ಸವಾರರು ಸಂಚರಿಸಲು ಪರದಾಡಬೇಕಿದೆ. ಕಳೆದ ನಾಲ್ಕು ವರ್ಷದಿಂದ ಬೀದರ್‌ನಿಂದ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಸಿರಗುಪ್ಪ ಮೂಲಕ ಹಾದು ಹೋಗಿರುವ 73 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 150ಎ ಕಾಮಗಾರಿ ಅಮೆಗಾತಿಯಲ್ಲಿ ನಡೆದಿದೆ. ಪ್ರಯಾಣಿಕರು ಓಡಾಟದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಸಂಡೂರಿನ ರೈಲು ಸಂಪರ್ಕ ವಿಸ್ತರಿಸಲು ಸ್ವಾಮಿಹಳ್ಳಿಯಿಂದ ಓಬಳಾಪುರಂ ಮಾರ್ಗವಾಗಿ ಸಂಪರ್ಕ ಕಲ್ಪಿಸುವುದು, ಹಂಪಿ ಪ್ರವಾಸೋದ್ಯಮ ಅಭಿವೃದ್ಧಿ, ಬಳ್ಳಾರಿ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ (ರಿಂಗ್ ರಸ್ತೆ) ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಜೀನ್ಸ್ ಅಪೆರಲ್ ಪಾರ್ಕ್ ಕಾಯಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಸಂಸದ ಈ.ತುಕಾರಾಮ್ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆಗಳು ಇದ್ದು, ಎಷ್ಟರ ಮಟ್ಟಿಗೆ ಘೋಷಣೆಯಾಗಲಿವೆ ಎಂಬುದಾಗಿ ಕಾದು ನೋಡಬೇಕಿದೆ.
ಕೋಟ್.. ಸಂಡೂರಿನ ಸ್ವಾಮಿಹಳ್ಳಿಯಿಂದ ಓಬಳಾಪುರಂಗೆ ರೈಲ್ವೆ ಸಂಪರ್ಕ, ಐತಿಹಾಸಿಕ ಹಂಪಿ ಪ್ರವಾಸೋದ್ಯಮ ಅಭಿವೃದ್ಧಿ, ಮರಿಯಮ್ಮನಹಳ್ಳಿಯಿಂದ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿಪರ ಯೋಜನೆಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ.
- ಈ.ತುಕಾರಾಮ್, ಸಂಸದ, ಬಳ್ಳಾರಿ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net