

ಪ್ರಮುಖ ಮುಖ್ಯಾಂಶಗಳು
ಬಳ್ಳಾರಿ : ಬಿಟಿಪಿಎಸ್ ನಿರ್ಮಾಣಕ್ಕಾಗಿ ಜಮೀನು ನೀಡಿದ್ದರೂ ಉದ್ಯೋಗ ಸಿಗದಿದ್ದಕ್ಕೆ ಮನನೊಂದ ವ್ಯಕ್ತಿಯೊಬ್ಬ ಮನೆಯ ಬಳಿಯ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ
ತಾಲೂಕಿನ ಕುಡತಿನಿ ಪಟ್ಟಣದ ಇಂದಿರಾ ನಗರದಲ್ಲಿ ಬುಧವಾರ ನಡೆದಿದೆ.
ಪಟ್ಟಣದ ನಿವಾಸಿ ಚಂದ್ರಶೇಖರ ( 44 ) ಮೃತ. 2001ರಲ್ಲಿ ಸ್ಥಾಪನೆಯಾದ ಬಳ್ಳಾರಿ ಥರ್ಮಲ್ ಪವರ್ ಪ್ಲಾಂಟ್‌ಗೆ (ಬಿಟಿಪಿಎಸ್)ಗೆ ತಮ್ಮ 2.5 ಎಕರೆ ಜಮೀನು ನೀಡಿದ್ದರು. ಜಮೀನು ಕಳೆದುಕೊಂಡ ಹಿನ್ನಲೆಯಲ್ಲಿ ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಬಿಟಿಪಿಎಸ್‌ಗೆ ಅಲೆಯುತ್ತಿದ್ದರು.
ಸಂಸ್ಥೆಯು ಉದ್ಯೋಗ ನೀಡುವುದಾಗಿ ಭರವಸೆ ನೀಡಿ ತರಬೇತಿ ನೀಡಿತ್ತು.
ಆದರೆ, ತರಬೇತಿ ಮುಗಿದು ಏಳು ತಿಂಗಳು ಕಳೆದರೂ ಉದ್ಯೋಗ ನೀಡದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿತ್ತು ಎಂಬುದಾಗಿ ಆರೋಪಿಸಲಾಗಿದೆ. ಇದರಿಂದ ತೀವ್ರ ಮನನೊಂದ ಚಂದ್ರಶೇಖರ ಅವರು ವಿದ್ಯುತ್ ತಂತಿ ಹಿಡಿದು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕುಟುಂಬಸ್ಥರು ಮೃತದೇಹವನ್ನು ಬಿಟಿಪಿಎಸ್ ಕಚೇರಿ ಮುಂದೆ ಇಟ್ಟು ಪ್ರತಿಭಟಿಸಿದರು. ಈ ಕುರಿತು ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.