ಕಂಪ್ಲಿಯಲ್ಲಿ ನಿವೃತ್ತಿ ಹೊಂದಿದ ಶಾಖಾ ಅಂಚೆ ಪಾಲಕರಾದ ಎಚ್.ಎಂ.ಪ್ರಭಾಕರಸ್ವಾಮಿ, ಎಸ್.ಎಂ.ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಅಂಚೆ ಪಾಲಕರಾದ ನಾಗರತ್ನಾ, ದೀಪಾ, ಮೇಲ್ವಿಚಾರಕರಾದ ಆರ್.ಎಂ.ಸೋಮಶೇಖರಯ್ಯ, ಕೆ.ನಾಗರಾಜ ಇತರರಿದ್ದರು.
ಕಂಪ್ಲಿ: ಅಂಚೆ ವಿಮೆ ಸದ್ಭಳಕೆ ಮಾಡಿಕೊಳ್ಳುವಲ್ಲಿ ನಾಗರೀಕರು ಜಾಗೃತರಾಗಬೇಕು ಎಂದು ಕಂಪ್ಲಿ ಬಜಾರ ಪ್ರಧಾನ ಅಂಚೆ ಕಚೇರಿ ಪಾಲಕಿ ನಾಗರತ್ನಾ ಹೇಳಿದರು.
ಐತಿಹಾಸಿಕ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಚೆ ಪಾಲಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಚೆ ಕಚೇರಿಯಲ್ಲಿ ಬ್ಯಾಂಕಿಂಗ್ ಸೇವೆ ಸಲ್ಲಿಸುತ್ತಿದ್ದು, ಹೆಚ್ಚು ವಿಶ್ವಾಸಾರ್ಹವಾಗಿದೆ. ಅಂಚೆ ಇಲಾಖೆಯ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು. ನಿವೃತ್ತಿ ಹೊಂದಿದ ಶಾಖಾ ಅಂಚೆ ಪಾಲಕರಾದ ಎಚ್.ಎಂ.ಪ್ರಭಾಕರಸ್ವಾಮಿ, ಎಸ್.ಎಂ.ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ದೇವಲಾಪುರ ಉಪ ಅಂಚೆ ಪಾಲಕಿ ದೀಪಾ, ಅಂಚೆ ಮೇಲ್ವಿಚಾರಕರಾದ ಆರ್.ಎಂ.ಸೋಮಶೇಖರಯ್ಯ, ಕೆ.ನಾಗರಾಜ, ಸಿರಗುಪ್ಪ ಉಪವಿಭಾಗದ ಕಚೇರಿ ಸಹಾಯಕ ರಾಮರೆಡ್ಡಿ, ಮಾರುಕಟ್ಟೆ ನಿರ್ವಾಹಕ ಬಸವರಾಜ, ಅಂಚೆ ಸಹಾಯಕ ಗಾದಿಲಿಂಗಪ್ಪ, ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ ಇತರರಿದ್ದರು.